ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆ. 1ರಂದು ತಮ್ಮ 8ನೇ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕತೆಗೆ ಚುರುಕು ಮುಟ್ಟಿಸುವ ಬಹುದೊಡ್ಡ ಸವಾಲು ಹಾಗೂ ನಿರೀಕ್ಷೆಗಳನ್ನು ಈ ಬಜೆಟ್ ಮೂಲಕ ನಿರೀಕ್ಷಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಫೆ. 1ರಂದು ಬೆಳಗ್ಗೆ 11ಕ್ಕೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಇದು ಅವರ 8ನೇ ಬಜೆಟ್ ಆಗಿದೆ. ಇದರಲ್ಲಿ ಎರಡು ಮಧ್ಯಂತರ ಬಜೆಟ್(Interim budget) ಕೂಡ ಸೇರಿವೆ.
ಮಧ್ಯಮ ವರ್ಗದವರ ಮೇಲಿರುವ ತೆರಿಗೆ ಹೊರೆಯ ಭಾರ ಇಳಿಸಬಹುದು ಎಂಬ ನಿರೀಕ್ಷೆಯು ಜನರದ್ದಾಗಿದೆ. ಉದ್ಯಮಗಳು ಹೆಚ್ಚಿನ ಉತ್ತೇಜನಕ್ಕಾಗಿ ಕಾಯುತ್ತಿವೆ. ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂಬ ಒತ್ತಡ ಇದೆ.
1ರಂದು ಬಜೆಟ್ ಮಂಡನೆ ಆಗುತ್ತದೆ. ಫೆಬ್ರುವರಿ 13ರ ವರೆಗೂ ಮೊದಲ ಹಂತದ ಬಜೆಟ್ ಸೆಷನ್ ಮುಂದುವರಿಯುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.