ಬೆಂಗಳೂರಿನಲ್ಲಿ ಇತ್ತೀಚೆಗೆ ಖದೀಮರ ಹಾವಳಿ ಮಿತಿ ಮೀರುತ್ತಿದೆ. ಸಿಎಂ ಮನೆಯ ಕೂಗಳತೆ ದೂರದಲ್ಲೇ ಖದೀಮನೊಬ್ಬ ಸಂಪ್ ಮುಚ್ಚಳ ಕದ್ದಿರುವ ಘಟನೆ ನಡೆದಿದೆ. ಸಿಎಂ ಹಾಗೂ ಸಚಿವರ ಸರ್ಕಾರಿ ಬಂಗಲೆಗಳ ಸಮೀಪವೇ ಹಾಡಹಗಲೇ ಕಂಪೌಂಡ್ ಜಿಗಿದು ಸಂಪ್ ಮುಚ್ಚಳ ಕದ್ದು ಪರಾರಿಯಾಗಿದ್ದಾನೆ.

ಕುಮಾರ ಕೃಪಾ ವೆಸ್ಟ್ ನಲ್ಲಿ ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ಆಧರಿಸಿ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.