ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದ ನಟ ಉಪೇಂದ್ರ ಅವರು ಪ್ರಿಯಾಂಕ ಅವರನ್ನು ಲವ್ ಮಾಡಿ ಮದುವೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗ ಆಯುಷ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ.
ಆಯುಷ್ಗೆ ಬೈಕ್ ಬಗ್ಗೆ ತುಂಬಾನೇ ಕ್ರೇಜ್ ಇದೆ. ಅವರು ದೇಶ-ವಿದೇಶಗಳನ್ನು ಸುತ್ತುತ್ತಾ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಉಪೇಂದ್ರ ಅವರ ಮಗಳು ಐಶ್ವರ್ಯಾ ಬಗ್ಗೆ ಹೇಳಬೇಕು ಅಂದರೆ, ಇವತ್ತು ಐಶ್ವರ್ಯಾಗೆ ಜನ್ಮದಿನದ ಸಂಭ್ರಮ, ಐಶ್ವರ್ಯಾ ಉಪೇಂದ್ರ ಅವರು ಜನಿಸಿದ್ದು 2008ರಲ್ಲಿ. ಈಗ ಅವರಿಗೆ 17 ವರ್ಷ ವಯಸ್ಸು. ಅವರು ಆಗಾಗ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ ಅದು ಬಿಟ್ಟರೆ ಐಶ್ವರ್ಯಾ ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿ ಇಲ್ಲ.
ಇವತ್ತು ಅವರ ಐಶ್ವರ್ಯ ಬರ್ತಡೇ ಇರುವುದರಿಂದ ಪ್ರಿಯಾಂಕ ಹಾಗೂ ಉಪೇಂದ್ರ ಅವರು ತುಂಬಾ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.
ಬರ್ತ್ಡೇ ಫೋಟೋಸ್ಗಳನ್ನು ಪ್ರಿಯಾಂಕ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಉಪ್ಪಿ ಪುತ್ರಿಗೆ ಶುಭಾಶಯ ಕೋರುತ್ತಿದ್ದಾರೆ.