ಸೂಪರ್ ಸ್ಟಾರ್ ರಜನಿಕಾಂತ್ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿರುವ ನಟ. ಅವರ ಸಿನಿಮಾ ಅಂದ್ರೆ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಅಷ್ಟು ಕ್ರೇಜ್ ಅವರ ಸಿನಿಮಾಗಿದೆ. ರಜನಿಕಾಂತ್ ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹಾಗಂತ ಅವರು ಎಂದಿಗೂ ಸುಮ್ಮನೆ ಕುಳಿತವರು ಅಲ್ಲವೇ ಅಲ್ಲ.
ರಜನಿಕಾಂತ್ ಅವರು ಪ್ರತಿ ಚಿತ್ರಕ್ಕೆ ಹೊಸ ರೀತಿಯ ಪಾತ್ರವನ್ನು ಮಾಡಲು ಬಯಸುತ್ತಾರೆ. ಈ ವಿಚಾರದಲ್ಲಿ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಈಗ ಅವರ ಮಾನವೀಯತೆ ಮೆರೆಯುವಂತ ವಿಡಿಯೋ ಒಂದು ವೈರಲ್ ಆಗಿದ್ದು ನೆಟ್ಟಿಗರು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ರಜನಿಕಾಂತ್ ಅವರು ಶೂಟಿಂಗ್ ಮಾಡುವಾಗ ಯಾವ ರೀತಿಯಲ್ಲಿ ಇರುತ್ತಾರೆ ಎಂಬುದನ್ನು ತಿಳಿಸುವಂತಹ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ರಜನಿಕಾಂತ್ ಅವರು ಸಹ ಕಲಾವಿದನಿಗೆ ಹೊಡೆದ ಬಳಿಕ ಯಾವ ರೀತಿ ನಡೆದುಕೊಂಡರು ಎಂಬುವುದು ಇದೆ. ಇದು ‘ಜೈಲರ್’ ಸಿನಿಮಾ ಶೂಟ್ ಸಂದರ್ಭದ ವಿಡಿಯೋ. ಇನ್ನು ರಜನಿಕಾಂತ್ ಅವರು ಶೂಟ್ನಲ್ಲಿ ಭಾಗಿ ಆಗುತ್ತಾರೆ ಎಂದರೆ ಅನೇಕರು ಬರುತ್ತಿರುತ್ತಾರೆ. ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಾರೆ. ಆದರೆ, ಅವರಿಗೆ ರಜನಿಕಾಂತ್ ಎಂದಿಗೂ ಬೇಸರ ಮಾಡಿದವರಲ್ಲ. ಅವರು ಶೂಟಿಂಗ್ ಪೂರ್ಣಗೊಳಿಸಿ ಹೋಗುವಾಗ ಎಲ್ಲರಿಗೂ ಕೈ ಮಾಡಿ ತೆರಳಿದ್ದಾರೆ. ಈ ಕಾರಣಕ್ಕೂ ಅವರು ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ.