ಬೆಂಗಳೂರು: ಟೆಕ್ಕಿಯೊಬ್ಬ ಬಿಎಂಟಿಸಿ ಬಸ್‌ನಲ್ಲಿ ಬ್ಯಾಗ್ ಮರೆತು ಹೋಗಿದ್ದ, ಬಳಿಕ ಬಿಎಂಟಿಸಿ ಬಸ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ತಂದೊಪ್ಪಿಸಿದ ಘಟನೆ ನಗರದ ವಿಮಾನ ನಿಲ್ಧಾನದಲ್ಲಿನಡೆದಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಬಸ್ ನಲ್ಲಿ ಬ್ಯಾಗ್ ಮರೆತು ಹೋಗಿದ್ದ ಸಾಫ್ಟ್‌ವೇರ್ ಡೆವಲಪರ್ ಕರಣ್ ಸಿಂಗ್, ಏರ್ಪೋಟ್ ಚೆಕ್ ಇನ್ ವೇಳೆ ಬ್ಯಾಗ್ ಬಸ್ ನಲ್ಲಿ ಮರೆತಿರೋದು ಗೊತ್ತಾಗಿದೆ. ಕೂಡಲೇ ಅಲ್ಲಿದ್ದ ಬಿಎಂಟಿಸಿ ಸಿಬ್ಬಂದಿ ಜೊತೆ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ವೇಳೆ ಬಿಎಂಟಿಸಿ ಸಿಬ್ಬಂದಿ ಬಸ್ ನ ಟಿಕೆಟ್ ತೋರಿಸುವಂತೆ ಹೇಳಿದರು. UPI ಟ್ರಾನ್ಸಾಕ್ಷನ್ ಮೂಲಕ ಟಿಕೆಟ್ ತಗೆದುಕೊಂಡು ಸ್ಕ್ರೀನ್ ಶಾಟ್ ತೋರಿಸ್ತಾನೆ. ಅದರಲ್ಲಿ ಬಸ್ ಸಂಖ್ಯೆ ಕಂಡುಬಂದಿದ್ದು ನಂತರ ಬಸ್‌ನ ಚಾಲಕರನ್ನು ಸಂಪರ್ಕ ಮಾಡಿ, ಬ್ಯಾಗ್ ತರೆಸಿಕೊಂಡಿದ್ದಾರೆ,
ಅತ್ಯಂತ ವೇಗವಾಗಿ ಈ ಕೆಲಸ ಆಗಿರುವುದರಿಂದ ಅವರ ವಿಮಾನ ಜರ್ನಿಗೂ ಯಾವುದೇ ತೊಂದರೆಯಾಗಿಲ್ಲ ಇದರಿಂದ ಬಿಎಂಟಿಸಿ ಸಿಬ್ಬಂದಿಯ ಕೆಲಸಕ್ಕೆ ಜಯಕರಣ್ ಸಿಂಗ್ ಟ್ವೀಟ್‌ನ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



















