ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ.
ಶೇ. 62.7ರಷ್ಟು ಫಲಿತಾಂಶದೊಟ್ಟಿಗೆ ಸರ್ಕಾರಿ ಶಾಲೆ ಮಕ್ಕಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಶೇ. 58ರಷ್ಟು ಫಲಿತಾಂಶದೊಟ್ಟಿಗೆ ಅನುದಾನಿತ ಶಾಲೆಗಳ ಮಕ್ಕಳು ರಿಸಲ್ಟ್ ಪಡೆದಿದ್ದರೆ, ಅನುದಾನ ರಹಿತ ಶಾಲೆಗಳ ಶೇ. 75ರಷ್ಟು ಪ್ರತಿಶತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಇನ್ನುಳಿದಂತೆ 144 ಶಾಲೆಗಳು ಶೂನ್ಯ ಫಲಿತಾಂಶ ಸಾಧನೆಗೆ ಪಾತ್ರವಾಗಿವೆ. ಈ ಪೈಕಿ 6 ಸರ್ಕಾರಿ ಶಾಲೆಗಳಿದ್ದರೆ, 30 ಅನುದಾನಿತ ಮತ್ತು 108 ಅನುದಾನ ರಹಿತ ಶಾಲೆಗಳು ಶೂನ್ಯ ಫಲಿತಾಂಶ ಸಾಧಿಸಿವೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 74ರಷ್ಟು ಬಾಲಕಿಯರು ಮತ್ತು ಶೇ. 58.07ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.