2024-25ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ. 66.14ರಷ್ಟು ಫಲಿತಾಂಶ ದಾಖಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8ರಷ್ಟು ಅಧಿಕ ರಿಸಲ್ಟ್ ಬಂದಿದೆ. ಇನ್ನು ಈ ಬಾರಿ ಪರೀಕ್ಷೆಯಲ್ಲಿ 625-625 ಅಂಕಗಳನ್ನ 22 ವಿದ್ಯಾರ್ಥಿಗಳ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.
ಕಳೆದ ವರ್ಷ ಕೇವಲ ಇಬ್ಬರು ಈ ಸಾಧನೆ ಮಾಡಿದ್ದರು. ಈ ಬಾರಿ ವಿಶೇಷ ಅಂದ್ರೆ ಈ ಬಾರಿ ಈ 22 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಸರ್ಕಾರಿ ಶಾಲೆ ಹಾಗೂ ಮತ್ತೋರ್ವ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿಯಾಗಿರುವುದು ವಿಶೇಷ. ಉಳಿದ ವಿದ್ಯಾರ್ಥಿಗಳು ಖಾಸಗಿ ಶಾಲೆ ಮಕ್ಕಳಾಗಿದ್ದಾರೆ. ಉಳಿದಂತೆ ಶೇ. 60ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾದವರ ಪ್ರಮಾಣ ಶೇ. 75ರಷ್ಟಾಗಿದೆ. ಕಳೆದ ವರ್ಷ ಇದು 62 ಪ್ರತಿಶತವಿತ್ತು ಅಂತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.