ಬಿಗ್‌ಬಾಸ್ ಕನ್ನಡ ಸೀಸನ್ 12ರ ನಾಲ್ಕನೇ ವೀಕೆಂಡ್ನಲ್ಲಿ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಗಿದೆ. ದೀಪಾವಳಿ ಪ್ರಯುಕ್ತ ಯಾವುದೇ ಎಲಿಮಿನೇಷನ್ ಇರೋದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ, ಬಿಗ್ ಬಾಸ್ನಲ್ಲಿ ಇದ್ದ ಸ್ಪರ್ಧಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಪ್ರ್ಯಾಂಕ್ ಎಲಿಮಿನೇಷನ್ಗೆ ರಾಶಿಕಾ ಹಾಗೂ ಸ್ಪಂದನಾ ಸೋಮಣ್ಣ ಒಂದು ಕ್ಷಣ ಕಂಗಾಲಾದರು. ಮನೆಯಿಂದ ಹೊರ ಹೊರಟ ರಾಶಿಕಾನ ಸೂರಜ್ ತಬ್ಬಿದ್ದಾರೆ.
ಸೂರಜ್ ಹಾಗೂ ರಾಶಿಕಾ ಮಧ್ಯೆ ಪ್ರೀತಿ ಮೂಡುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೆ, ನೋಡುಗರಿಗೆ ಇದು ತುಂಬಾನೇ ನಾಟಕೀಯ ಎನಿಸುತ್ತಿದೆ. ಜನಪ್ರಿಯತೆ ಗಳಿಸಬೇಕು ಎಂಬ ಕಾರಣಕ್ಕೆ ರಾಶಿಕಾ ಅವರು ಈ ರೀತಿಯ ಪ್ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸುದೀಪ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಗ್ ಬಾಸ್ ರಾಶಿಕಾಗೆ ಚಮಕ್ ನೀಡಿದರು. ನಾಮಿನೇಟ್ ಆದವರ ಪೈಕಿ ಧ್ರುವಂತ್, ರಾಶಿಕಾ ಹಾಗೂ ಸ್ಪಂದನಾ ಅವರು ಅಂತಿಮವಾಗಿ ಉಳಿದುಕೊಂಡರು. ಈ ಪೈಕಿ ಧ್ರುವಂತ್ ಸೇವ್ ಆದರು. ಈ ಬೆನ್ನಲ್ಲೇ, ‘ರಾಶಿಕಾ ಹಾಗೂ ಸ್ಪಂದನಾ ನೀವಿನ್ನು ಮನೆಯಿಂದ ಹೊರಡಬಹುದು’ ಎಂದರು. ಇದರಿಂದ ರಾಶಿಕಾ ಹಾಗೂ ಸ್ಪಂದನಾ ಕಣ್ಣೀರು ಹಾಕಲು ಆರಂಭಿಸಿದರು.
ಓಡಿ ಬಂದ ಸೂರಜ್ ಅವರು ರಾಶಿಕಾನ ತಬ್ಬಿಕೊಂಡರು. ಸೂರಜ್ಗೂ ಇದು ಸಾಕಷ್ಟು ಬೇಸರ ಮೂಡಿಸಿತು. ‘ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಸೂರಜ್ ಹೇಳಿದರು. ಆ ಬಳಿಕ ಮುಖ್ಯದ್ವಾರ ಓಪನ್ ಆಯ್ತು ಅದರಲ್ಲಿ‘ನೋ ಎಲಿಮಿನೇಷನ್’ ಎಂಬ ಬೋರ್ಡ್ ಕಂಡು ರಾಶಿಕಾ ಹಾಗೂ ಸ್ಪಂದನಾ ಖುಷಿ ಆದರು. ಸೂರಜ್ ಓಡಿ ಬಂದು ರಶಿಕಾಳನ್ನು ತಬ್ಬಿಕೊಂಡರು.
ಇದನ್ನು ಓದಿ : ಸತಾರಾ ವೈದ್ಯೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ವೈದ್ಯೆಯ ವಿರುದ್ಧ ಮಹಿಳೆ ಗಂಭೀರ ಆರೋಪ!



















