ಗಾಯಕ ಸೋನು ನಿಗಮ್ (Sonu Nigam) ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಸಂಗೀತ ಕಾರ್ಯಕ್ರಮದಲ್ಲೇ ಬೆನ್ನು ನೋವಿನಿಂದ ಒದ್ದಾಡಿದ್ದಾರೆ.
ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಸೋನು ನಿಗಮ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಅವರಿಗೆ ಮೇಲೆ ಏಳಲು ಕೂಡ ಆಗದ ಸ್ಥಿತಿ ಆಗ ಎದುರಾಗಿದೆ. ಕೂಡಲೇ ಅಲ್ಲಿದ್ದವರನ್ನು ಸೋನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ತಮ್ಮ ಆರೋಗ್ಯದ ಬಗ್ಗೆ ಫ್ಯಾನ್ಸ್ಗೆ ಗಾಯಕ ಸಾಮಾಜಿಕ ಜಾಲತಾಣದ ಮೂಲಕ ವಿವರಣೆ ನೀಡಿದ್ದಾರೆ.
ಸೋನು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ನನ್ನ ಜೀವನದ ಅತ್ಯಂತ ಕಷ್ಟದ ದಿನ. ನಾನು ಹಾಡುತ್ತ ವೇದಿಕೆ ಮೇಲೆಲ್ಲ ಓಡಾಡುತ್ತಿದ್ದೆ. ಆಗ ನನಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಆದರೆ, ಆ ಸಂದರ್ಭವನ್ನು ನಾನು ಸುಧಾರಿಸಿದೆ. ನನ್ನ ಬೆನ್ನು ಹುರಿಗೆ ಯಾರೋ ಇಂಜೆಕ್ಷನ್ ಸೂಜಿ ಚುಚ್ಚುತ್ತಿದ್ದಾರೆ ಅಂತಾ ಅನಿಸಿತು. ಸ್ವಲ್ಪ ಅಲ್ಲಾಡಿದರೂ ನೋವು ಹೆಚ್ಚಾಗುತ್ತಿತ್ತು ಎಂದು ಹೇಳಿದ್ದಾರೆ. ಅಲ್ಲದೇ, ತಮ್ಮ ಪೋಸ್ಟ್ ಕ್ಯಾಪ್ಶನ್ ನಲ್ಲಿ ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು ಎಂದು ಬರೆದುಕೊಂಡಿದ್ದಾರೆ.
ಸೋನು ನಿಗಮ್ ಕನ್ನಡದಲ್ಲಿ ಕೂಡ ಹಾಡಿದ್ದಾರೆ. ಹಲವಾರು ಹಾಡುಗಳನ್ನು ಹಾಡಿರುವ ಅವರು ಬಹುಭಾಷಾ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ.