ಬೆಂಗಳೂರು: ಸಮ್ಮರ್ ಟೂರ್ ಪ್ಲ್ಯಾನ್ ಮಾಡಿದವರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಬೇಸಿಗೆ ರಜೆ ಇದೆ ಎಂದು ಪ್ರವಾಸದ ಪ್ಲ್ಯಾನ್ ಮಾಡಿದವರಿಗೆ ದರ ಏರಿಕೆಯ ಬಿಸಿ ತಟ್ಟಿದೆ.
ಇಂದಿನಿಂದ ಕ್ಯಾಬ್, ಟ್ರಾವೆಲ್ಸ್ ಕಿ. ಮೀ ದರ ಏರಿಕೆಯಾಗಿದೆ. ಸಾಮಾನ್ಯ ಕ್ಯಾಬ್ ಗಳಿಗೆ 2 ರಿಂದ 3 ರೂ. ವರೆಗೆ ಏರಿಕೆಯಾಗಿದೆ. ಟ್ರಾವೆಲ್ಸ್ ಮಾಲೀಕರು ದರ ಏರಿಕೆ ಮಾಡಿದ್ದಾರೆ. ಐಷಾರಾಮಿ ವಾಹನಗಳ ಕಿ.ಮೀ ದರ 5 ರಿಂದ 8 ರೂಪಾಯಿ ವರೆಗೆ ಏರಿಕೆಯಾಗಿದೆ.
ಇಂದಿನಿಂದ ಬಹುತೇಕ ಎಲ್ಲ ಟ್ರಾವೆಲ್ಸ್ ಅಸೋಸಿಯೇಷನ್ ಒಮ್ಮತದಿಂದ ದರ ಏರಿಕೆಗೆ ನಿರ್ಧಾರ ಕೈಗೊಂಡಿವೆ. ತೈಲ ಬೆಲೆ, ಟೋಲ್ ದರ, ವಾಹನದ ಸ್ಪೇರ್ ಪಾರ್ಟ್ಸ್ ಸೇರಿದಂತೆ ಎಲ್ಲಾ ಬಗೆಯ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಿ.ಮೀ ದರ ಏರಿಕೆ ಮಾಡಲಾಗಿದೆ ಎಂದು ಟ್ರಾವೆಲ್ಸ್ ಮಾಲೀಕರು ಹೇಳಿದ್ದಾರೆ.
ಸದ್ಯ ಕಿ.ಮೀಗೆ ಸಾಮಾನ್ಯ ಕಾರುಗಳಿಗೆ 15 ರೂ. ದರ ಇತ್ತು. ಇನ್ನು ಮುಂದೆ ಗ್ರಾಹಕರು ಇಷ್ಟೇ ದೂರಕ್ಕೆ 18 ರೂ. ನೀಡಬೇಕಿದೆ. ಐಷಾರಾಮಿ ಕಾರುಗಳ ದರ ಕಿ.ಮೀಗೆ 20 ರೂ.ನಿಂದ 25ಕ್ಕೆ ಏರಿಕೆಯಾಗಿದೆ. ಅಲ್ಲದೇ, ಟೂರಿಸ್ಟ್ ಬಸ್, ಇನ್ನಿತರ ಟೂರಿಸ್ಟ್ ವಾಹನಗಳ ದರ ಕಿ.ಮೀಗೆ 10 ರಿಂದ 15 ರೂ. ವರೆಗೆ ಏರಿಕೆಯಾಗಿದೆ.