ಬೆಂಗಳೂರು: ಅಂಗಡಿಗಳ ರೋಲಿಂಗ್ ಶಟರ್ ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಹೊಸಕೋಟೆ ನಗರದ ಕೆ.ಆರ್ ರಸ್ತೆಯಲ್ಲಿ ನಡೆದಿದೆ. ಮಧ್ಯರಾತ್ರಿ ಅಂಗಡಿಗಳಿಗೆ ನುಗ್ಗಿರುವ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರಾಡ್ನಿಂದ ರೋಲಿಂಗ್ ಶಟರ್ ಹೊಡೆದು ಕಿರಾತಕರು ಬಟ್ಟೆ ಅಂಗಡಿ, ಗೃಹಬಳಕೆ ವಸ್ತುಗಳ ಅಂಗಡಿ, ಹಾರ್ಡ್ ವೇರ್ ಸೇರಿದಂತೆ ಇನ್ನಿತರ ಅಂಗಡಿಗಳಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.