ಬೆಂಗಳೂರು: ಏರ್ ಪೋರ್ಟ್ ಫ್ಲೈ ಓವರ್ ಮೇಲೆ ನಾಲ್ಕು ಕಾರುಗಳ ಮಧ್ಯೆ ಸರಣಿ ಅಪಘಾದ ನಡೆದಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ಏರ್ಪೋರ್ಟ್ ಗೆ ತೆರಳುವ ಮಾರ್ಗದಲ್ಲಿ ನಿನ್ನೆ ಮಧ್ಯರಾತ್ರಿ 12 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಅತಿವೇಗವಾಗಿ ಬರುತ್ತಿದ್ದ ವಾಹನಗಳ ಮಧ್ಯೆ ಈ ಅಪಘಾದ ಸಂಭವಿಸಿದೆ. ಒಂದರ ಹಿಂದೆ ಒಂದರಂತೆ 4 ಕಾರುಗಳು ಅಪಘಾತಕ್ಕೊಳಗಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.