ಚಿಕ್ಕಮಗಳೂರು: ಕಾರ್ಯ ನಿರ್ವಹಿಸುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ನಿಂದ ಸೆಕ್ಯೂರಿಟಿ ಗಾರ್ಡ್ ನಿಧನರಾಗಿರುವ ಘಟನೆ ನಡೆದಿದೆ.
55 ವರ್ಷದ ಶಿವಾನಂದ್ ಸಾವನ್ನಪ್ಪಿರುವ ದುರ್ದೈವಿ. ಸೆಕ್ಯೂರಿಟಿ ಗಾರ್ಡ್ ಚೇರ್ ಮೇಲೆ ಕುಳಿತ ವೇಳೆಯೇ ಹಾರ್ಟ್ ಅಟ್ಯಾಕ್ ಆಗಿದ್ದು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸೆಕ್ಯೂರಿಟಿ ಗಾರ್ಡ್ ಗೆ ಹಾರ್ಟ್ ಅಟ್ಯಾಕ್ ಆಗಿ ಅವರು ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ TVS ಸಾತ್ವಿಕ್ ಶೋರೂಮ್ ನಲ್ಲಿ ಈ ಘಟನೆ ನಡೆದಿದೆ. ಶೋರೂಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಸೆಕ್ಯೂರಿಟಿ ಗಾರ್ಡ್ ಬಲಿಯಾಗಿದ್ದಾರೆ. ಶಿವಾನಂದ್ ಜಿಲ್ಲೆಯ ಹಿರೇಗೌಡ್ ಗ್ರಾಮದವರು ಎನ್ನಲಾಗಿದೆ. ಅವರು ಕಳೆದ 6 ತಿಂಗಳಿನಿಂದ TVS ಶೋ ರೂಮ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.