ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಅಲ್ಲದೇ, ರಾಜ್ಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ವಿದ್ಯಾರ್ಥಿನಿಯರೇ ಗಳಿಸಿದ್ದು ಕೂಡ ವಿಶೇಷವಾಗಿದೆ. ಮೊದಲ ಮೂರು ಸ್ಥಾನಗಳಲ್ಲೂ ಬಾಲಕಿಯರು ಪಾರುಪತ್ಯ ಮೆರೆದಿದ್ದಾರೆ.
ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕು ಇಂದು ಪಿಯು ಕಾಲೇಜಿನ ಎಲ್.ಆರ್. ಸಂಜನಾಬಾಯಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಂಜನಾಬಾಯಿ 600ಕ್ಕೆ 597 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಪಂಚಮಸಾಲಿ ಪಿಯು ಕಾಲೇಜಿನ ಕೆ.ನಿರ್ಮಲಾ ದ್ವಿತೀಯ ಸ್ಥಾನ ಗಳಿಸಿದ್ದರು. ಕೆ.ನಿರ್ಮಲಾ 600ಕ್ಕೆ 596 ಅಂಕ ಗಳಿಸಿದ್ದಾರೆ.
ರಾಜ್ಯಕ್ಕೆ ಮೂರನೇ ಸ್ಥಾನವನ್ನು ಬೆಂಗಳೂರಿನ ಮಲ್ಲೇಶ್ವರಂದಲ್ಲಿರುವ ಮಹಾರಾಣಿ ವುಮೆನ್ ಪಿಯು ಕಾಲೇಜಿನ ಕೆ.ಆರ್. ಶ್ರೀಜಿಯಾ ದರ್ಶಿನಿ ಗಳಿಸಿದ್ದಾರೆ. ಅವರು 600ಕ್ಕೆ 595 ಅಂಕ ಗಳಿಸಿದ್ದಾರೆ.