ಬೆಂಗಳೂರು: ದೇಶದಲ್ಲೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಖ್ಯಾತಿ ಗಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ (ಎಸ್ ಬಿಐ) ಕೆಲಸ ಮಾಡಬೇಕು ಎಂಬ ಬಯಕೆ ಹೊಂದಿದವರಿಗೆ ಸುವರ್ಣಾವಕಾಶ ದೊರೆತಿದೆ. ಎಸ್ ಬಿಐನಲ್ಲಿ 30 ಇಆರ್ ಎಸ್ ರಿವ್ಯೂವರ್ (ERS Reviewer) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಏಪ್ರಿಲ್ 22 ಕೊನೆಯ ದಿನವಾಗಿದೆ. sbi.co.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ 4 ಹುದ್ದೆಗಳನ್ನು ಎಸ್ಸಿ ವರ್ಗಕ್ಕೆ, 2 ಹುದ್ದೆಗಳನ್ನು ಎಸ್ಟಿ0ಗೆ, 7 ಹುದ್ದೆಗಳನ್ನು ಒಬಿಸಿಗೆ, 3 ಹುದ್ದೆಗಳನ್ನು ಇಡಬ್ಲ್ಯೂಎಸ್ ವರ್ಗಕ್ಕೆ ಮತ್ತು 14 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ವಿದ್ಯಾರ್ಹತೆ ಹಾಗೂ ಕಾರ್ಯಾನುಭವದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಎಸ್ ಬಿಐನಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲನೆಯದಾಗಿ ಅಭ್ಯರ್ಥಿಗಳ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ಸಮಿತಿಯು ಆಯ್ಕೆ ಮಾಡುವ ಕಿರುಪಟ್ಟಿ ಪ್ರಕ್ರಿಯೆ ಇರುತ್ತದೆ. ಇದಾದ ನಂತರ 100 ಅಂಕಗಳ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಎಸ್ ಬಿಐನ ವೆಬ್ಸೈಟ್ bank.sbi/careers ಗೆ ಭೇಟಿ ನೀಡಬೇಕು.
- ನಂತರ “CRPD/RS/2025-26/01” ಎಂಬ ಜಾಹೀರಾತು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಈಗ ನಿಮ್ಮ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯ ಸಹಾಯದಿಂದ ನೋಂದಣಿ ಮಾಡಿಕೊಳ್ಳಬೇಕು.
- ಪಾಸ್ ಪೋರ್ಟ್ ಸೈಜಿನ ಫೋಟೋ, ಸಹಿ (ಜೆಪಿಇಜಿ ಸ್ವರೂಪದಲ್ಲಿ), ಬಯೋಡೇಟಾ, ಗುರುತಿನ ಚೀಟಿ ಮತ್ತು ಪಿಂಚಣಿದಾರರ ಐಡಿ (ಪಿಡಿಎಫ್ ಸ್ವರೂಪದಲ್ಲಿ) ಸೇರಿ ವಿವಿಧ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
- ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ, ಅರ್ಜಿ ಸಲ್ಲಿಸಿ ಮತ್ತು ಭವಿಷ್ಯದ ಬಳಕೆಗಾಗಿ ಅದರ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.