ಸದಾ ನಮ್ಮ ಫಿಟ್ನೆಸ್ ವಿಚಾರಕ್ಕೆ ಅವಕಾಶ ವಂಚನೆಗೊಳಗಾಗುವ ಸರ್ಫರಾಜ್ ಖಾನ್ ಇದೀಗ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದ್ದಾರೆ.
ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೇಲೆ ಕಣ್ಣಿಟ್ಟಿರುವ ಯುವ ಬ್ಯಾಟರ್ ಸರ್ಪರಾಜ್ ಖಾನ್ ತಮ್ಮ ಕಡೆಗಣನೆಗೆ ಕಾರಣವಾಗಿದ್ದ ದೇಹದ ತೂಕವನ್ನ ಕಡಿಮೆ ಮಾಡಿಕೊಂಡಿದ್ದಾರೆ. ಅದು ಕೂಡ ಕೇವಲ ಆರೇ ವಾರದಲ್ಲಿ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲೂ ನಿರ್ಲಕ್ಯಕ್ಕೊಳಗಾಗಿ ಆಡುವ ಅವಕಾಶ ಕಳೆದುಕೊಂಡಿದ್ದ ಸರ್ಫರಾಜ್, ತಮ್ಮ ಖಡಕ್ ಡಯಟ್ ನಿಂದ ಈಗ ಎಲ್ಲರ ಗಮನ ಸೆಳೆಯುವಂತಾಗಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಇನ್ನಷ್ಟೇ ತಂಡದ ಆಯ್ಕೆಯಾಗಬೇಕಿದೆ. ಇದೀಗ ಸರ್ಫರಾಜ್ ಖಾನ್ ಸ್ಲಿಮ್ ಆಗುವ ಮೂಲಕ ನಾನೂ ಆಯ್ಕೆಗೆ ಲಭ್ಯ ಎನ್ನುವ ಪರೋಕ್ಷ ಸಂದೇಶ ರವಾನಿಸಿದ್ದಾರೆ.