ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆರು ಬಾರಿ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಆಟಗಾರ್ತಿ ಇದೀಗ ಐಷಾರಾಮಿ ಕಾರಿನ ಒಡತಿಯಾಗಿದ್ದಾರೆ. ಸಾನಿಯಾ ಇತ್ತೀಚೆಗಷ್ಟೇ ಪೋರ್ಶೆ ಬಾಕ್ಸ್ ಸ್ಟಾರ್ 718 ಕಾರನ್ನು ಖರೀದಿಸಿದ್ದಾರೆ.
ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಹೊಸ ಐಷಾರಾಮಿ ಕಾರಿನ ಮೌಲ್ಯ 1.6 ಕೋಟಿ. ಈ ಬಗ್ಗೆ ವಿಶಯ ಹಂಚಿಕೊಂಡಿರುವ ಸಾನಿಯಾ ನನ್ನ ಕನಸು ನನಸಾಗಿದೆ ಅಂತಾ ಸಂಭ್ರಮ ಹಂಚಿಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟರ್ ಶೋಯೆಬ್ ಮಲಿಕ್ ರನ್ನು ವಿವಾಹವಾಗಿದ್ದ ಸಾನಿಯಾ 2024ರಲ್ಲಿ ವಿಚ್ಛೇದನ ಪಡೆದಿದ್ದರು. ಸದ್ಯ ಪುತ್ರ ಇಜಾನ್ ಮಿರ್ಜಾ ಜೊತೆ ಹೈದರಾಬಾದ್ ನಲ್ಲಿ ಸಾನಿಯಾ ನೆಲೆಸಿದ್ದಾರೆ.