ಬಾಲಿವುಡ್ ಬಾದ್ ಷಾ ಅಂತಾನೇ ಪ್ರಖ್ಯಾತಿ ಹೊಂದಿರುವ ನಟ ಸಲ್ಮಾನ್ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಅಂದ್ರೆ ಸಾಕು ಕಥೆ ಎಂತದ್ದೇ ಇರಲಿ ಮೂರು ದಿನ ಮುಂಚೆನೇ ಟಿಕೇಟ್ ಬುಕ್ ಮಾಡಿ ಅವರ ಫ್ಯಾನ್ಸ್ ಸಿನಿಮಾ ನೋಡುತ್ತಾರೆ.
ಆದರೆ, ಇತ್ತಿಚೆಗೆ ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ನಟಿಸಿರುವ ಸಿಕಂದರ್ ಮೂವಿ ಫ್ಲಾಪ್ ಆಯಿತು. ಇದು ಸಲ್ಲು ಕರಿಯರ್ನಲ್ಲಿ ದೊಡ್ಡ ಸೋಲು ಅಂತಾನೇ ಹೇಳಬಹುದು. ಆದ್ರೆ ಇದೀಗ ಖುಷಿಯ ವಿಚಾರ ಏನಪ್ಪಾ ಅಂದ್ರೆ ಸಿಕಂದರ್ ಮೂವಿ ಒಟಿಟಿಗೆ ಲಗ್ಗೆ ಇಡುತ್ತಿದೆ. ಸಿಕಂದರ್’ ಒಂದು ಫ್ಲಾಪ್ ಸಿನಿಮಾ ಆಗಿದ್ದರೂ ಕೂಡ ಅದನ್ನು ನೆಟ್ಫ್ಲಿಕ್ಸ್ ಖರೀದಿಸಿದೆ.
ಯಾಕೆಂದರೆ, ಸಲ್ಮಾನ್ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರೆಲ್ಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡದಿದ್ದರೂ ಕೂಡ ಒಟಿಟಿಯಲ್ಲಿ ಖಂಡಿತಾ ಒಂದು ಬಾರಿ ಸಿನಿಮಾ ನೋಡುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇವತ್ತಿನಿಂದ ನೆಟ್ಫ್ಲಿಕ್ಸ್ ಮೂಲಕ ‘ಸಿಕಂದರ್’ ಸಿನಿಮಾ ಪ್ರಸಾರ ಆಗುತ್ತಿದ್ದು. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಸತ್ಯರಾಜ್, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ ಮುಂತಾದವರು ನಟಿಸಿದ್ದಾರೆ.