ಶಿವಮೊಗ್ಗ: ನಗರದಲ್ಲಿ ಅಧಿಕಾರಿ ಹಾಗೂ ಚಾಲಕರೊಬ್ಬರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಪಾಲ ಗೌಡ ಬಡಾವಣೆಯ ನಿವಾಸದ ಮೇಲೆ ಬೆಂಗಳೂರು ಇಡಿ ಕಚೇರಿಯ ತಂಡ ದಾಳಿ ನಡೆಸಿದೆ.
ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಮೂರು ಪ್ರತ್ಯೇಕ ವಾಹನಗಳಲ್ಲಿ ಆಗಮಿಸಿದ 8ಕ್ಕೂ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
2014ರ ಜೂನ್ ನಲ್ಲಿ ನಕಲಿ ಗೋಲ್ಡ್ ಪ್ರಕರಣ ಬೆಳಕಿಗೆ ಬಂದಿತ್ತು. ಸುಮಾರು 68 ಕೋಟಿ ರೂ. ಮೌಲ್ಯದ ಗೋಲ್ಡ್ ಪ್ರಕರಣ ನಡೆದಿತ್ತು. ಈ ಹಗರಣ ಶಿವಮೊಗ್ಗದ ಗಾಂಧಿ ಬಜಾರ್ ನಗರ ಶಾಖೆಯಲ್ಲಿ ನಡೆದಿತ್ತು. ಆ ವೇಳೆ ಶಾಖೆಯ ಮ್ಯಾನೇಜರ್ ಆಗಿ ಶೋಭಾ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ಆ ವೇಳೆ ಬ್ಯಾಂಕ್ ನ ವಾಹನ ಚಾಲಕನಾಗಿದ್ದ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದೆ. ಕಾಮಾಕ್ಷಿ ಬೀದಿಯ ಶಿವಕುಮಾರ್ ಎಂಬುವವರ ಮನೆಯ ಮೇಲೆಯೂ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಏಕಕಾಲಕ್ಕೆ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.