ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ರಾಜಕಾಲುವೆಯನ್ನು ಇನ್ನು ಮುಂದೆ ಜಿಬಿಎ ವ್ಯಾಪ್ತಿಗೆ ವಹಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.
ರಾಜಕಾಲುವೆಯಲ್ಲಿ ಯಾವುದೆ ಸಮಸ್ಯೆ ಆದರೆ ಇನ್ನುಮುಂದೆ ಜಿಬಿಎಗೆ ಹೋಗಬೇಕು. ಜಿಬಿಎಯಿಂದ ನಗರದ ರಾಜಕಾಲುವೆ ಹೂಳು ತೆರವು ಹಾಗೂ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನೆರವು ನೀಡಲಾಗುದ್ದು, ಈಗಾಗಲೇ ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನಿಂದ 2 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ.
ಒಟ್ಟು 16 ಪ್ಯಾಕೇಜ್ ಗಳಲ್ಲಿ ರಾಜಕಾಲುವೆ ಅಭಿವೃದ್ಧಿ ಹಾಗೂ ಕಾಮಗಾರಿಗೆ ಈಗಾಗಲೇ ಜಿಬಿಎ ಯಿಂದ ಟೆಂಡರ್ ಅಹ್ವಾನಿಸಲಾಗಿದ್ದು, ರಾಜಕಾಲುವೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಇಂಜಿನಿಯರ್ ನೇಮಕಾತಿಗೆ ಮುಂದಾಗಿದೆ.
ಬಿಬಿಎಂಪಿಯಲ್ಲಿ ಸಾಧ್ಯವಾಗದ ರಾಜಕಾಲುವೆ ಅಭಿವೃದ್ಧಿ ಜಿಬಿಎಯಿಂದ ಸಾಧ್ಯವಾಗುತ್ತಾ ಎಂಬುವುದೇ ಜನಸಾಮಾನ್ಯರ ಪ್ರಶ್ನೆಯಾಗಿದೆ.



















