ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯ ಗ್ರೌಂಡ್ ಫ್ಲೋರ್ ಸೀಜ್ ಮಾಡಿದ್ದಾರೆ.
ನಿವೃತ್ತ ಡಿಜಿಪಿ ಓಂಪ್ರಕಾಶ್ ಮರ್ಡರ್ ನಡೆದಿದ್ದ ಗ್ರೌಂಡ್ ಫ್ಲೋರ್ ನ್ನು ಸೀಜ್ ಮಾಡಿದ್ದಾರೆ. ಮನೆಯ ಮೊದಲ ಫ್ಲೋರ್ ನಲ್ಲಿ ಓಂ ಪ್ರಕಾಶ್ ಮಗ ಮತ್ತು ಸೊಸೆ ವಾಸಿಸುತ್ತಿದ್ದಾರೆ. ಈಗ ಸಾಕ್ಷಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗ್ರೌಂಡ್ ಫ್ಲೋರ್ ಸೀಜ್ ಮಾಡಿದ್ದಾರೆ.
ಎಸಿಪಿ ವಾಸುದೇವ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಓಂ ಪ್ರಕಾಶ್ ರಾವ್ ಪತ್ನಿ ಹಾಗೂ ಮಗಳನ್ನು ವಶಕ್ಕೆ ಪಡೆದು ಮಡಿವಾಳ ಠಾಣೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈಗ ಪತ್ನಿ ಹಾಗೂ ಮಗಳು ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದಾರೆ. ಕೊಲೆ ನಡೆದ 8 ಗಂಟೆಗಳ ನಂತರ ಕರೆ ತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಇಬ್ಬರ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಓಂ ಪ್ರಕಾಶ್ ಹಾಗೂ ತಮ್ಮ ಜಗಳದ ಬಗ್ಗೆ ಪತ್ನಿ, ಹಲವರಿಗೆ ವ್ಯಾಟ್ಸಪ್ ಮೂಲಕ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳ ಗ್ರೂಪ್ ನಲ್ಲೂ ಮೆಸೆಜ್ ಹಾಕಿದ್ದರು. ಹೀಗಾಗಿ ಪೊಲೀಸರು ಪತ್ನಿ ಪಲ್ಲವಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.