ಬೆಂಗಳೂರು: ಭಾರತೀಯ ಬಂದರು ಸಂಘದಲ್ಲಿ ಖಾಲಿ ಇರುವ 41 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕೋಲ್ಕತ್ತದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರು ಹಾಗೂ ಕೋಲ್ಕತ್ತ ಡಾಕ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಜುಲೈ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಸಂಸ್ಥೆ: ಇಂಡಿಯನ್ ಅಸೋಸಿಯನ್ ಆಫ್ ಪೋರ್ಟ್ಸ್
ಇವರ ಪರವಾಗಿ ಅಧಿಸೂಚನೆ: ಕೋಲ್ಕತ್ತ ಡಾಕ್ ಸಿಸ್ಟಮ್
ಹುದ್ದೆಗಳ ಹೆಸರು: ಎಕ್ಸಿಕ್ಯೂಟಿವ್ ಲೆವೆಲ್
ಒಟ್ಟು ಹುದ್ದೆ: 41
ಫೈನಾನ್ಸಿ ಡಿಸಿಪ್ಲಿನ್, ಅಕೌಂಟ್ಸ್ ಆಫೀಸರ್ ಗ್ರೇಡ್ 1, ಅಸಿಸ್ಟಂಟ್ ಮ್ಯನೇಜರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 20,600-46,500 ರೂಪಾಯಿವರೆಗೆ ವೇತನ ಇದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ https://www.ipa.nic.in/ ವೆಬ್ ಸೈಟ್ ಗೆ ಭೇಟಿ ನೀಡಿ
- Job Openings/Careers ಮೇಲೆ ಕ್ಲಿಕ್ ಮಾಡಿ
- ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
- ಅಗತ್ಯ ಮಾಹಿತಿಯನ್ನು ಒದಗಿಸಿ
- ಎಲ್ಲ ದಾಖಲೆಗಳನ್ನು ಅಪ್ ಲೋಡ್ ಮಾಡಿ
- ಸಬ್ ಮಿಟ್ ಕೊಟ್ಟರೆ ಅರ್ಜಿ ಸಲ್ಲಿಕೆಯಾದಂತೆ
- ಫ್ಯೂಚರ್ ರೆಫರೆನ್ಸ್ ಗಾಗಿ ರಶೀದಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ