ಬೆಂಗಳೂರು: ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಅಸಿಸ್ಟಂಟ್ ಕಂಟ್ರೋಲರ್ ಸೇರಿ ಆರು ಹುದ್ದೆಗಳ ನೇಮಕಾತಿಗಾಗಿ ಆದೇಶ ಹೊರಡಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮೇ 5 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕಂದಾಯ ಇಲಾಖೆಯ kandaya.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. ಅರ್ಜಿಗಳನ್ನು ಆಫ್ ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಂಸ್ಥೆ- ಕರ್ನಾಟಕ ಕಂದಾಯ ಇಲಾಖೆ
ಹುದ್ದೆಗಳು- 06
ಸಂಬಳ- 35 ಸಾವಿರ ರೂ.-75 ಸಾವಿರ ರೂ.
ಸ್ಥಳ- ಬೆಂಗಳೂರು
ಅಸಿಸ್ಟಂಟ್ ಕಂಟ್ರೋಲರ್, ಆಡಿಟ್ ಆಫೀಸರ್ , ಅಕೌಂಟ್ಸ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಬಿಕಾಂ, ಸಿಎ ಶಿಕ್ಷಣಗಳ ಜತೆಗೆ ರಾಜ್ಯ, ಕೇಂದ್ರ ಸರ್ಕಾರದ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವವರು ಅಥವಾ ಅಂತಹ ಸೇವೆಯಿಂದ ಕೊನೆ ಎರಡು ವರ್ಷಗಳಲ್ಲಿ ನಿವೃತ್ತಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.
ಲೀಗಲ್ ಆಫೀಸರ್ ಮತ್ತು ಲೀಗಲ್ ಅಡ್ವೈಸರ್ ಹುದ್ದೆಗಳಿಗೆ ಎಲ್ಎಲ್ಬಿ, ಎಲ್ ಎಲ್ ಎಂ ಕೋರ್ಸಿನ ಜತೆಗೆ, ಕರ್ನಾಟಕ ಬಾರ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು. 5-10 ವರ್ಷ ಅನುಭವ ನಿಗದಿಪಡಿಸಲಾಗಿದೆ. ಪ್ರೈವೇಟ್ ಸೆಕ್ರೆಟರ್ (ಜೂನಿಯರ್) ಹುದ್ದೆಗಳಿಗೆ ಪದವಿ ಜತೆಗೆ ಕಂಪ್ಯೂಟರ್, ಸ್ಟೆನೋಗ್ರಫಿ ಅರಿವು ಇರಬೇಕು, ಎಲ್ಎಲ್ಬಿ ಪಡೆದವರಿಗೆ ಆದ್ಯತೆ ಇರಲಿದೆ. 2-3 ವರ್ಷ ಅನುಭವ ನಿಗದಿ ಮಾಡಲಾಗಿದೆ. ಐಟಿ ಪರ್ಸನಲ್-2 ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ವರ್ಕಿಂಗ್ ಮ್ಯಾನೇಜರ್ ಹುದ್ದೆಗಳಿಗೆ ಬಿಇ ಇನ್ ಸಿಎಸ್ಇ , ಐಎಸ್ ಜತೆಗೆ ಪ್ರಮಾಣಪತ್ರಗಳನ್ನು ಪಡೆದಿರಬೇಕು. ಕನಿಷ್ಠ 1 ವರ್ಷ ಅನುಭವ ಇರಬೇಕು.
ಯಾವ ಹುದ್ದೆ ಎಷ್ಟು ಖಾಲಿ?
ಅಸಿಸ್ಟಂಟ್ ಕಂಟ್ರೋಲರ್- 1
ಆಡಿಟ್ ಆಫೀಸರ್- 1
ಅಕೌಂಟ್ಸ್ ಸೂಪರಿಂಟೆಂಡೆಂಟ್- 1
ಲೀಗಲ್ ಆಫೀಸರ್ ಮತ್ತು ಲೀಗಲ್ ಅಡ್ವೈಸರ್- 1
ಪ್ರೈವೇಟ್ ಸೆಕ್ರೆಟರಿ (ಜೂನಿಯರ್) – 1
ಐಟಿ ಪರ್ಸನಲ್-2 ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ವರ್ಕಿಂಗ್ ಮ್ಯಾನೇಜರ್- 1
ಅರ್ಜಿ ಸಲ್ಲಿಕೆ ವಿಳಾಸ
ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ, 3ನೇ ಮತ್ತು 4ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು – 560001.