ಬೆಂಗಳೂರು: ರಾಷ್ಟ್ರೀಯ ರಾಸಾಯನಿಕ ಮತ್ತು ಗೊಬ್ಬರ ನಿಯಮಿತ ಸಂಸ್ಥೆ (RCFL Recruitment 2025) ಸಂಸ್ಥೆಯಲ್ಲಿ ಖಾಲಿ ಇರುವ 75 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫೀಸರ್ ಮತ್ತು ಮ್ಯಾನೇಜ್ ಮೆಂಟ್ ಟ್ರೇನಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ಸಂಸ್ಥೆ: ರಾಷ್ಟ್ರೀಯ ರಾಸಾಯನಿಕ ಮತ್ತು ಗೊಬ್ಬರ ನಿಯಮಿತ
ಒಟ್ಟು ಹುದ್ದೆಗಳು : 75
ಉದ್ಯೋಗ ಸ್ಥಳ : ದೇಶಾದ್ಯಂತ
ಹುದ್ದೆ ಹೆಸರು : ಆಫೀಸರ್, ಮ್ಯಾನೇಜ್ ಮೆಂಟ್ ಟ್ರೇನಿ
ಅರ್ಜಿಯ ಮೋಡ್ : ಆನ್ ಲೈನ್
ಯಾವ ಹುದ್ದೆ ಎಷ್ಟು ಖಾಲಿ?
ಆಫೀಸರ್ (ಫೈನಾನ್ಸ್) : 10
ಮ್ಯಾನೇಜ್ ಮೆಂಟ್ ಟ್ರೇನಿ (ಬಾಯ್ಲರ್) : 5
ಮ್ಯಾನೇಜ್ ಮೆಂಟ್ ಟ್ರೇನಿ (ಮಾರ್ಕೆಟಿಂಗ್) : 3
ಮ್ಯಾನೇಜ್ ಮೆಂಟ್ ಟ್ರೇನಿ (ಕೆಮಿಕಲ್) : 11
ಮ್ಯಾನೇಜ್ ಮೆಂಟ್ ಟ್ರೇನಿ (ಮೆಕ್ಯಾನಿಕಲ್) : 2
ಮ್ಯಾನೇಜ್ ಮೆಂಟ್ ಟ್ರೇನಿ (ಪರಿಸರ) : 1
ಮ್ಯಾನೇಜ್ ಮೆಂಟ್ ಟ್ರೇನಿ (ಎಲೆಕ್ಟ್ರಿಕಲ್) : 3
ಮ್ಯಾನೇಜ್ ಮೆಂಟ್ ಟ್ರೇನಿ (ಇನ್ ಸ್ಟ್ರುಮೆಂಟೇಷನ್) : 3
ಮ್ಯಾನೇಜ್ ಮೆಂಟ್ ಟ್ರೇನಿ (ಸಿವಿಲ್) : 5
ಮ್ಯಾನೇಜ್ ಮೆಂಟ್ ಟ್ರೇನಿ (ಸೇಫ್ಟಿ) : 1
ಮ್ಯಾನೇಜ್ ಮೆಂಟ್ ಟ್ರೇನಿ (ಮಟೀರಿಯಲ್) : 19
ಆಯಾ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಸಿಎ, ಬಿ.ಕಾಮ್, ಬಿಬಿಎ, ಎಂಬಿಎ, ಬಿಇ, ಬಿಟೆಕ್, ಎಂ.ಕಾಂ, ಎಂಟೆಕ್, ಬಿಎಸ್ಸಿ ಕೋರ್ಸ್ ಗಳನ್ನು ಮುಗಿಸಿರಬೇಕು. ನೇಮಕಾತಿ ಹೊಂದಿದವರಿಗೆ ಮಾಸಿಕ 60 ಸಾವಿರ ರೂಪಾಯಿಯಿಂದ 1.04 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು rcfltd.com ವೆಬ್ ಸೈಟ್ ಗೆ ಭೇಟಿ ನೀಡಬಹುದು. ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.