ಮಂಗಳೂರು: ಮಂಗಳೂರಿನಲ್ಲಿರುವ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್ ನಲ್ಲಿ ಖಾಲಿ ಇರುವ 10 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎರಡು ಸೀನಿಯರ್ ಅಸಿಸ್ಟಂಟ್ ಹಾಗೂ ಎಂಟು ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗಾಗಿ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ನೇಮಕಾತಿ ಸಂಸ್ಥೆ: ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಒಟ್ಟು ಹುದ್ದೆಗಳು: 10
ಹುದ್ದೆಗಳ ಹೆಸರು: ಜೂನಿಯರ್ ಹಾಗೂ ಸೀನಿಯರ್ ಅಸಿಸ್ಟಂಟ್
ಸಂಬಳ: 20 ಸಾವಿರ ರೂ.-40 ಸಾವಿರ ರೂ.
ಸ್ಥಳ: ಮಂಗಳೂರು
ಶೈಕ್ಷಣಿಕ ಅರ್ಹತೆ ಏನು?
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಸಿಎ, ಬಿಎಸ್ಸಿ, ಬಿಬಿಎಂ, ಬಿಎ, ಬಿ.ಕಾಂ, ಬಿ.ಇ, ಬಿ.ಕಾಂ, ಎಂಸಿಎ ಸೇರಿ ಯಾವುದೇ ಪದವಿ ಪಡೆದಿರಬೇಕು. 18ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಒಬಿಸಿಯವರಿಗೆ 3 ವರ್ಷ ಹಾಗೂ ಎಸ್ಸಿ, ಎಸ್ಟಿಯವರಿಗೆ ಐದು ವರ್ಷಗಳ ವಿನಾಯಿತಿ ಇದೆ.
ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಈ ಕೆಳಗಿನ ವಿಳಾಸಕ್ಕೆ ಜೂನ್ 9ರೊಳಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಸೇರಿ ಯಾವುದೇ ರೀತಿಯಲ್ಲಿ ಅರ್ಜಿಗಳಲ್ಲು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://mccbank.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ
General Manager, Mangalore Catholic Cooperative Bank Ltd., Administrative Office, Second Floor, Hampanakatta, Mangalore-575001.