ಬೆಳಗಾವಿ: ಬೆಳಗಾವಿಯಲ್ಲಿ ಮಳೆ ಅಬ್ಬರಕ್ಕೆ ಜಲಪಾತಗಳಿಗೆ ಜೀವಕಳೆ ಬಂದಿದೆ. ಜಲಪಾತ ವೀಕ್ಷಿಸಲು ಹೋದ ಪ್ರವಾಸಿಗರು ಅಪಾಯವನ್ನೂ ಲೆಕ್ಕಿಸದೆ ಆಳಕ್ಕೆ ಇಳಿದು ಹುಚ್ಚಾಟ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್ನಲ್ಲಿ ಜನರು ಅಪಾಯ ಮೀರಿ ಕೆಳಗೆ ಇಳಿಯುತ್ತಿದ್ದಾರೆ. ಚಿಕಲೆ ಜಲಪಾತ ಜಲವೈಭವ ವೀಕ್ಷಣೆಗೆ ತೆರಳಿದ ಪ್ರವಾಸಿಗರು 100 ಅಡಿ ಉದ್ದದ ಜಲಪಾತದ ಆಳಕ್ಕೆ ಇಳಿದು ಪ್ರವಾಸಿ ಯುವಕರು ಡ್ಯಾನ್ಸ್ ಮಾಡುತ್ತಿದ್ದಾರೆ. ಅಲ್ಲದೆ ಫಾಲ್ಸ್ ಕೆಳಗಿನ ಆಳವಾದ ಸ್ಥಳಕ್ಕೆ ಹೋಗಲು ಯತ್ನಸಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ ಜಿಲ್ಲಾಡಳಿತ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.