ಬೆಂಗಳೂರು: ಗೇಮಿಂಗ್ ಪ್ಲಾಟ್ ಫಾರ್ಮ್ ಮೇಲೆ ಇಡಿ ದಾಳಿ ನಡೆಸಿದ್ದು, ಕೋಟಿ ಕೋಟಿ ಹಣ ಸೀಜ್ ಮಾಡಲಾಗಿದೆ.
ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ 7 ಸ್ಥಳಗಳಲ್ಲಿ ದಾಳಿ ನಡೆಸಿದ ಇಡಿ ಅಧಿಕಾರಿಗಳು ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ದಾಳಿ ವೇಳೆ 39 ಲಕ್ಷ ರೂ. ನಗದು ಹಣ ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ 48 ಮ್ಯೂಲ್ ಖಾತೆಗಳಲ್ಲಿ 1.5 ಕೋಟಿ ರೂ. ಹಣ ಸೀಜ್ ಮಾಡಲಾಗಿದೆ. ಡಿಜಿಟಲ್ ಎವಿಡೆನ್ಸ್ ಗಳು, ಮೊಬೈಲ್ ಗಳು, ಸಿಮ್ ಕಾರ್ಡ್ ಗಳನ್ನು ಅಧಿಕಾರಿಗಳು ವಶಕ್ಕೆ ಪೆಡದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದಾಂಶು ಶೇಖರ್ ಮಿಶ್ರಾ ಮತ್ತು ಸಹಚರರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೆದಾಂಶು ಶೇಖರ್ ಮಿಶ್ರಾ ಈ ಹಿಂದೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನ ಅಧಿಕಾರಿಯಾಗಿದ್ದ ಎನ್ನಲಾಗಿದೆ.