ಹುಬ್ಬಳ್ಳಿ: ಅಂಗನವಾಡಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟಿದ್ದ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಯಲದವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಹಾರ ನಿರೀಕ್ಷಕ ರಾಜೀವಸಿಂಗ್ ಬೆಂಗಳೂರಕರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಅಂಗನವಾಡಿ ಆಹಾರ ಧಾನ್ಯ ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಯಲದವಾಳ ಗ್ರಾಮದ ಚಂದ್ರಕಾಂತ ವಂಡಕರ ಎಂಬಾತನ ಮನೆಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡಲಾಗಿತ್ತು.
ದಾಳಿ ನಡೆಸಿದ ಅಧಿಕಾರಿಗಳು 1,83,072 ರೂ. ಮೌಲ್ಯದ ಪೌಷ್ಟಿಕ ಆಹಾರವನ್ನು ವಶಕ್ಕೆ ಪಡೆದಿದ್ದಾರೆ. ಅಕ್ಕಿ, ಬೆಲ್ಲ, ಮಕ್ಕಳ ಪುಷ್ಟಿ ಕಿಟ್, ಮಿಲ್ಲೆಟ್ ಲಡ್ಡು, ಗೋದಿ ನುಚ್ಚು, ಅನ್ನಪೂರ್ಣ ಹೆಸರಿನ ಚಿಗಳು, ರವಾ ಮತ್ತಿತರವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.