ಪಪ್ಪಿ ಸಿನಿಮಾ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸದಾಶಿವನಗರದ ಹೈಡ್ ಪಾರ್ಕ್ ನಲ್ಲಿ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕದ ಭಾಷೆ ಹಾಗೂ ಕಥಾ ಹಂದರ ಹೊಂದಿರುವ ಪಪ್ಪಿ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಟ ಶಿವಣ್ಣ, ರಮ್ಯಾ, ಧ್ರುವಾ ಸರ್ಜಾ ಸಿನಿಮಾಗೆ ಶುಭ ಹಾರೈಸಿದ್ದಾರೆ. ಪತ್ರಿಕಾಗೋಷ್ಠಿ ವೇಳೆ ಚಿತ್ರ ತಂಡದವರಿಗೆ ಚಿತ್ರದ ಯಶಸ್ಸಿನ ಹಿನ್ನಲೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ ನಟಿ ಸಂಜನಾ ಆನಂದ್ ಮಾತನಾಡಿ, ಒಂದು ಸಿನಿಮಾ 50 ದಿನ ಪೂರೈಸುತ್ತಿದೆ ಅಂದರೆ, ಅದು ತಮಾಷೆಯಲ್ಲ. ಅದರಲ್ಲಿ ಈ ಸಿನಿಮಾ ಯಶಸ್ಸು ಕಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಪಪ್ಪಿ ಸಿನಿಮಾದ ನಿರ್ದೇಶಕ ಆಯುಷ್ ಮಲ್ಲಿ ಮಾತನಾಡಿ, ನನ್ನ ಸಿನಿಮಾವನ್ನು ಈಗ ಗೆಲ್ಲಿಸಿದ್ದೀರಿ. ಇಡೀ ಕರ್ನಾಟಕ ನಮ್ಮ ಸಿನಿಮಾ ಇಷ್ಟ ಪಟ್ಟಿದ್ದೀರಿ. ಶಿವಣ್ಣ, ದ್ರುವ ಅವರ ಬೆಂಬಲಕ್ಕೆ ಖುಣಿಯಾಗಿರುತ್ತೇನೆ ಎಂದರು.