ಪಂಜಾಬ್ : ಕೆನಡಾದಲ್ಲಿ ಪಂಜಾಬಿ ಹುಡುಗಿಯ ಕೊಲೆಯಾದ ಸುದ್ದಿ ಬೆಳಕಿಗೆ ಬಂದಿದೆ. ಸಂಗ್ರೂರ್ ನಿವಾಸಿ ಅಮನ್‌ಪ್ರೀತ್ ಸೈನಿ (27) ಅವರ ಮೃತದೇಹ ಒಂಟಾರಿಯೊದ ಚಾರ್ಲ್ಸ್ ಡಾಲಿ ಪಾರ್ಕ್‌ನಲ್ಲಿ ಪತ್ತೆಯಾಗಿದೆ.
ಅಮನ್‌ಪ್ರೀತ್ ಅವರ ದೇಹದಲ್ಲಿ ಗಾಯಗಳ ಗುರುತುಗಳು ಕಂಡುಬಂದಿವೆ. ಈ ಬಗ್ಗೆ ಕೆನಡಾದ ಪೊಲೀಸರು ತನಿಖೆ ನಡೆಸಿ, ಪಂಜಾಬ್‌ನವರೇ ಆದ ಮನ್‌ಪ್ರೀತ್ ಸಿಂಗ್ (27) ಅವರನ್ನು ಕೊಲೆಯ ಆರೋಪಿಯನ್ನಾಗಿ ಶಂಕಿಸಿದ್ದಾರೆ.
ಇದೀಗ ಕೆನಡಾದ ಪೊಲೀಸರು ಮನ್‌ಪ್ರೀತ್ ವಿರುದ್ಧ ಎರಡನೇ ಡಿಗ್ರಿ ಕೊಲೆಯ ವಾರಂಟ್ ಹೊರಡಿಸಿದ್ದಾರೆ. ಮೃತ ಅಮನ್‌ಪ್ರೀತ್ ಕೌರ್ ಕಳೆದ 4 ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದರು. ಅವರು ಸಂಗ್ರೂರ್‌ನ ಪ್ರೇಮ್ ಬಸ್ತಿ ಪ್ರದೇಶಕ್ಕೆ ಸೇರಿದವರು ಎಂಬುದು ತಿಳಿದುಬಂದಿದೆ. ಅಮನ್‌ಪ್ರೀತ್ ಕೌರ್ ಅವರ ಅಕ್ಕ ಕೆನಡಾ ಪೊಲೀಸ್ ಠಾಣೆಯಲ್ಲಿ ಸಹೋದರಿ ಕಾಣೆಯಾಗಿದ್ದಾರೆಂದು ದೂರು ದಾಖಲಿಸಿದ ನಂತರ ಈ ಸಂಪೂರ್ಣ ವಿಷಯ ಬೆಳಕಿಗೆ ಬಂದಿದೆ.
ಇದನ್ನು ಓದಿ : ಮೇಕೆಗಳ ವಿಚಾರಕ್ಕೆ ಗಲಾಟೆ; ತಂದೆಯನ್ನೇ ನದಿಗೆ ತಳ್ಳಿ ಕೊಂದ ಪಾಪಿ ಮಗ!



















