ಮುಲ್ತಾನ್ಪುರ್: ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡ ಕೆಕೆಆರ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ.
ಬೌಲರ್ ಗಳ ಮಿಂಚಿನ ದಾಳಿಗೆ ಕೆಕೆಆರ್ ತತ್ತರಿಸಿ ಹೋಗಿದೆ. ಅಲ್ಲದೇ, ಪಂಜಾಬ್ ಬ್ಯಾಟಿಂಗ್ ಕೂಡ ಕೆಕೆಆರ್ ಬೌಲರ್ ಗಳಿಗೆ ಮಂಡಿಯೂರಿತ್ತು. ಪಂಜಾಬ್ ಮತ್ತು ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ 20 ವಿಕೆಟ್ ಪತನಗೊಂಡರೂ ಕೊನೆಗೂ ಪಂಜಾಬ್ ರೋಚಕ 16 ರನ್ಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 15.2 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟ್ ಆಗಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಕೋಲ್ಕತ್ತಾ 15.1 ಓವರ್ಗಳಲ್ಲಿ ಕೇವಲ 95 ರನ್ ಗಳಿಸಿ ಸೋಲು ಕಂಡಿತು. ರಹಾನೆ 17 ರನ್, ರಘುವಂಶಿ 37, 17 ರನ್ ಗಳಿಸಿದರು. ಪಂಜಾಬ್ ಪರ ಚಹಲ್ 4, ಜಾನ್ಸೆನ್ 3, ಮ್ಯಾಕ್ಸ್ವೆಲ್, ಆರ್ಶ್ದೀಪ್ ಸಿಂಗ್, ಬಾರ್ಟ್ಲೆಟ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಕೂಡ ಆರಂಭಿಕ ಆಘಾತ ಎದುರಿಸಿ, ಪೆವಿಲಿಯನ್ ಪರೇಡ್ ನಡೆಸಿತು. ಪ್ರಿಯಾಂಶ್ ಅರ್ಯಾ 22 ರನ್, ಪ್ರಭುಸಿಮ್ರಾನ್ ಸಿಂಗ್ 30, ಶಶಾಂಕ್ ಸಿಂಗ್ 18 ರನ್ ಗಳಿಸಿದರು. ಕೆಕೆಆರ್ ಪರ ಹರ್ಷಿತ್ ರಾಣಾ 3 ವಿಕೆಟ್, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ 2 ವಿಕೆಟ್, ವೈಭವ್ ಅರೋರ, ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್ ಕಿತ್ತರು.