ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೊದಲ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಗ್ರಾಮದ ಮಾಗಡಿ ಕಾಫಿ ಎಸ್ಟೇಟ್ ನಲ್ಲಿ ಸಲಗ ಅಡಗಿತ್ತು.
ಕರ್ನಾಟಕ ಭೀಮ ನೇತೃತ್ವದ ಆರು ಸಾಕಾನೆಗಳಿಂದ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಇದೀಗ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಬಳಿ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ನಾಲ್ಕು ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಐದು ಜನರು ಬಲಿಯಾಗಿದ್ದರು. ಇದೀಗ ಸಿಸಿಎಫ್ ಏಡುಕುಂಡಲ, ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದಲ್ಲಿ ಎರಡನೇ ಹಂತದ ಕಾರ್ಯಚರಣೆ ನಡೆಸಿ ಕಾಡಾನೆ ಸೆರೆ ಹಿಡಿಯಲಾಗಿದೆ.
ಮಾರ್ಚ್ ತಿಂಗಳಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಮೂರು ಕಾಡಾನೆಗಳನ್ನು ಸೆರೆ ಹಿಡಿದಿತ್ತು.