ಬೆಂಗಳೂರು: ಹಿಂದೆಲ್ಲ ಕೈಯ್ಯನ್ನು ತಲೆ ಮೇಲಿಟ್ಟು ಅಲ್ಲಿಂದ ಕಿವಿ ಮುಟ್ಟಿಸಿದರೆ ಸಾಕಿತ್ತು. ಆಗ 1ನೇ ತರಗತಿಗೆ ಸೇರಿಕೊಳ್ಳುತ್ತಿದ್ದರು. ಆದರೆ, ಈಗ 1 ನೇ ತರಗತಿ ದಾಖಲಾತಿಗೆ ಸರ್ಕಾರ ನಿಯಮ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಕೆಲವು ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಲು ನಿರ್ಧರಿಸಿವೆ.
ಸರ್ಕಾರದ ಈ ಹಿಂದಿನ ವಯೋಮಿತಿ ನಿಯಮವನ್ನು ಈಗಾಗಲೇ ಅನುಸರಿಸಲಾಗಿದೆ. ಇದರ ಪ್ರಕಾರವೇ ದಾಖಲಾತಿ ಕೂಡ ಮಾಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಈಗ ಏಕಾಏಕಿ ಈ ನಿರ್ಧಾರಕ್ಕೆ ಬಂದಿರುವುದು ಅತಿದೊಡ್ಡ ಸಮಸ್ಯೆಯಾಗಿದೆ ಎಂದು ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಸರ್ಕಾರ ಈ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿದೆ. ಜೊತೆಗೆ ಯುಕೆಜಿ ಕಂಪ್ಲೀಟ್ ಮಾಡಿರಬೇಕು ಅಂತಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಪಾಲಿಸಿಯೇ ಎಲ್ಕೆಜಿಗೆ ದಾಖಲಾಗಿರುವ ಮಕ್ಕಳ ಸ್ಥಿತಿ ಏನು? ಎಂದು ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಹಿಂದಿನ ನಿಯಮದ ಪ್ರಕಾರ 1 ನೇ ತರಗತಿಯ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕು ಅಂತಾ ಇದೆ. ಹೀಗಾಗಿ ಈಗ ಏಕಾಏಕಿ ಈ ನಿಯಮ ಜಾರಿಗೊಳಿಸಿದ್ದು, ತೊಂದರೆ ಸೃಷ್ಟಿಸುವಂತಿದೆ ಎದು ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.