ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
1999 ಬ್ಯಾಚ್ ನ KES ಮುಖ್ಯೋಪಾಧ್ಯಾಯರಿಗೆ ಭಾರೀ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆರು ತಿಂಗಳಿಗೆ ಸಿಗಬೇಕಾದ ಪ್ರಮೋಷನ್ ವರ್ಷ ಕಳೆದರು ಸಿಕ್ಕಿಲ್ಲ. ಒಟ್ಟಾರೆ 120 ಸ್ಥಾನ ಖಾಲಿಯಾಗಿದ್ದರೂ ಪ್ರಮೋಷನ್ ಸಿಗದೆ ಹೈರಾಣಾಗಿದ್ದಾರೆ.
ನಿಯಮ 32 ರಂತೆ ಖಾಲಿ A ವೃಂದದ ಅಧಿಕಾರಿ ನೇಮಕಕ್ಕೆ ಆಗ್ರಹಿಸಲಾಗಿದ್ದು, ಇನ್ನಾದರೂ ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ನೊಂದ ಮುಖ್ಯೋಪಾಧ್ಯಾಯರಿಗೆ ನ್ಯಾಯ ಸಿಗುತ್ತಾ ಎಂಬುವುದನ್ನು ಕಾಯ್ದು ನೋಡಬೇಕಿದೆ.