ಚಿತ್ರದುರ್ಗ: ನವ ಜೋಡಿಯೊಂದು ರೈಲ್ವೆ ಟ್ರ್ಯಾಕ್ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಲು ಹೋಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಕ್ಷಣ ಮಾತ್ರದಲ್ಲಿ ಯುವ ಜೋಡಿ ದೊಡ್ಡ ಅನಾಹುತದಿಂದ ಪಾರಾಗಿದೆ. ಇಲ್ಲವಾದರೆ ಪ್ರಾಣ ಪಕ್ಷಿಯನ್ನೇ ಹಾರಿಸಿಕೊಂಡು ಹೋಗುತ್ತಿತ್ತು. ಚಿತ್ರದುರ್ಗದ ಮದಕರಿ ಪುರ ಹೊಸ ಹೈವೇ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದೆ.
5 ಜನ ಸೇರಿಕೊಂಡು ರೈಲ್ವೆ ಟ್ರ್ಯಾಕ್ ಮೇಲೆ ಫೋಟೋ ಶೂಟ್ ಇರುವಾಗಲೇ ಏಕಾಏಕಿ ಪ್ಯಾಸೆಂಜರ್ ರೈಲು ಬಂದಿದೆ.
ರೈಲು ಬರುತ್ತಿದ್ದಂತೆ ಜೋಡಿ ಸೈಡ್ ಗೆ ಹೋಗಿದೆ. ಹೀಗಾಗಿ ಕ್ಷಣಮಾತ್ರದಲ್ಲಿ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿ, ಫೋಟೋಗ್ರಾಫರ್ ಹಾಗೂ ಮದುವೆ ಜೋಡಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.