ಪಾಕಿಸ್ತಾನದ ಅಬೀರ್ ಗುಲಾಲ್ ಚಿತ್ರವೇನು ನೀಲಿ ಚಿತ್ರವಾ? ಪಾಕಿಸ್ತಾನದ ಈ ಸಿನಿಮಾ ನಿಷೇಧವನ್ನು ಪ್ಯಾನ್ ಇಂಡಿಯಾ ನಟ ಪ್ರಕಾಶ್ ರೈ ಖಂಡಿಸಿದ್ದಾರೆ.

ಯಾವುದೇ ಸಿನಿಮಾವನ್ನು ನಿರ್ಬಂಧಿಸುವ ಹಕ್ಕು ಯಾರೊಬ್ಬರಿಗೂ ಇಲ್ಲ. ಒಂದೊಮ್ಮೆ ಮಕ್ಕಳ ಮೇಲಿನ ದೌರ್ಜನ್ಯ ಇಲ್ಲವೇ ನೀಲಿ ಚಿತ್ರವಾದರೆ ಮಾತ್ರ ಅಂಥವನ್ನು ಬ್ಯಾನ್ ಮಾಡಿ. ಇಲ್ಲದಿದ್ದರೆ ಪ್ರತಿ ಸಿನಿಮಾವನ್ನು ನೋಡುವುದು, ನೋಡದಿರುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ನಾನು ಎಂದಿಗೂ ಸಿನಿಮಾಗಳನ್ನು ನಿಷೇಧಿಸುವುದರ ವಿರೋಧಿ ಅಂತಾ ಪ್ರಕಾಶ್ ರೈ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ನರಮೇಧ ನಿಜಕ್ಕೂ ಖಂಡನೀಯ. ಹಾಗಂತಾ ಪಾಕಿಸ್ತಾನದ ಸಿನಿಮಾವನ್ನು ನಿರ್ಬಂಧಿಸಿದರೆ ಏನು ಲಾಭ? ಉಗ್ರವಾದಕ್ಕೂ ಪಾಕಿಸ್ತಾನದ ಸಿನಿಮಾಗೂ ಏನು ಸಂಬಂಧ ಅಂತಾ ಅವರು ಪ್ರಶ್ನಿಸಿದ್ದಾರೆ. ಮೇ 9ರಂದು ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ಅಬೀರ್ ಗುಲಾಲ್ ಬಿಡುಗಡೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೀಗ ಚಿತ್ರ ಭಾರತದಲ್ಲಿ ತೆರೆ ಕಾಣುವುದು ಸದ್ಯಕ್ಕೆ ಮರೀಚಿಕೆ ಅಂತಲೇ ಹೇಳಬಹುದಾಗಿದೆ.