ಬೆಂಗಳೂರು: ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ಬಾಂಡ್ ಗಳ ಸಹವಾಸ ನಮಗೆ ಬೇಡ. ನಮಗೇನಿದ್ದರೂ ಸುರಕ್ಷಿತ ಹೂಡಿಕೆ ಬೇಕು. ಕಡಿಮೆ ರಿಟರ್ನ್ಸ್ ಬಂದ್ರೂ ಪರ್ವಾಗಿಲ್ಲ, ನಾವು ಹೂಡಿಕೆ ಮಾಡಿದ ಹಣಕ್ಕೆ ಗ್ಯಾರಂಟಿ ಇರಬೇಕು ಅನ್ನೋರು ರಿಕರಿಂಗ್ ಡೆಪಾಸಿಟ್ ಮಾದರಿಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ, ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲೂ ಆರ್ ಡಿ ಖಾತೆಯನ್ನು ತೆರೆಯಬಹುದಾಗಿದೆ. ಆದರೆ, ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಬೇಕು, ಎಸ್ ಬಿಐ ಸೇರಿ ಯಾವುದಾದರೂ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಬೇಕೋ ಎಂಬ ಗೊಂದಲ ಕಾಡುತ್ತದೆ. ಆದರೆ, ಗೊಂದಲ ಬೇಡ, ಪೋಸ್ಟ್ ಆಫೀಸ್ ಆರ್ ಡಿಯಲ್ಲಿ ಎಷ್ಟು ರಿಟರ್ನ್ಸ್ ಇದೆ? ಎಸ್ ಬಿ ಐ ನಲ್ಲಿ ಆರ್ ಡಿ ಖಾತೆ ತೆರೆದರೆ ಎಷ್ಟು ಬಡ್ಡಿ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಎಸ್ ಬಿ ಐ ಆರ್ ರಿಟರ್ನ್ಸ್ ಎಷ್ಟು?
ದೇಶದ ಬೃಹತ್ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹರ್ ಘರ್ ಲಕ್ಪತಿ RD ಒಂದು ಗುರಿ ಆಧಾರಿತ ಯೋಜನೆಯಾಗಿದ್ದು, ಖಾಸಗಿ ಮತ್ತು ಜಂಟಿ ಖಾತೆದಾರರು ಯೋಜನೆಯ ಭಾಗವಾಗಬಹುದು. ಈ ಯೋಜನೆಯು 10 ವರ್ಷ ಅಥವಾ ಹೆಚ್ಚು ವಯಸ್ಸಿನ ಅಪ್ರಾಪ್ತ ವಯಸ್ಕರಿಗೆ ಸಹ ಲಭ್ಯವಿದೆ. ಹೂಡಿಕೆಯನ್ನು 100 ರೂಪಾಯಿಯಿಂದ ಪ್ರಾರಂಭಿಸಬಹುದು. ಪ್ರಸ್ತುತ SBI 5 ವರ್ಷಗಳ ಅವಧಿಗೆ ವಾರ್ಷಿಕ 6.30% ಬಡ್ಡಿ ನೀಡುತ್ತದೆ.
ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗುತ್ತದೆ. ಇದರಿಂದ ಬಡ್ಡಿಯ ಮೇಲೆ ಬಡ್ಡಿ ಲಾಭವನ್ನು ಪಡೆಯಬಹುದು. 12,500 ರೂಪಾಯಿಯನ್ನು ಪ್ರತಿ ತಿಂಗಳು 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಒಟ್ಟು 7,50,000 ರೂಪಾಯಿ ಹೂಡಿಕೆ ಆಗುತ್ತದೆ. ಈ ಅವಧಿಯ ಕೊನೆಯಲ್ಲಿ ಲಭ್ಯವಾಗುವ ಅಂದಾಜು ಬಡ್ಡಿ 1,32,726 ರೂಪಾಯಿ ಆಗಿದ್ದು, ಒಟ್ಟು 8,82,726 ಸಿಗುತ್ತದೆ.
ಪೋಸ್ಟ್ ಆಫೀಸ್ ಆರ್ ಡಿ ಬಡ್ಡಿ ಎಷ್ಟು?
ಕೇಂದ್ರ ಸರ್ಕಾರದಿಂದ ನೇರವಾಗಿ ಬೆಂಬಲಿತವಾದ ಪೋಸ್ಟ್ ಆಫೀಸ್ RD ಯೋಜನೆಯು ಅತ್ಯಂತ ಭದ್ರ ಮತ್ತು ವಿಶ್ವಾಸಾರ್ಹ ಯೋಜನೆಯಾಗಿದ್ದು, ಅಪಾಯವನ್ನು ತಪ್ಪಿಸಲು ಬಯಸುವ ಹೂಡಿಕೆದಾರರಿಗೆ ಇದೊಂದು ಸೂಕ್ತ ಆಯ್ಕೆಯಾಗಿದೆ. ಈ ಯೋಜನೆಯ ಅವಧಿ ನಿಗದಿತವಾಗಿ 5 ವರ್ಷಗಳಾಗಿದ್ದು, ಪ್ರಸ್ತುತ ವಾರ್ಷಿಕ 6.7% ಬಡ್ಡಿದರವನ್ನು ನೀಡುತ್ತಿದೆ. ಈ ಬಡ್ಡಿಯೂ ತ್ರೈಮಾಸಿಕವಾಗಿ ಸಂಯೋಜನೆಯಾಗುತ್ತದೆ. ಹೂಡಿಕೆಗೆ ಕನಿಷ್ಠ 100 ರೂಪಾಯಿ ಬೇಕಾಗಿದ್ದು, ಗರಿಷ್ಠ ಮಿತಿಯಿಲ್ಲ. ನೀವು ಸೂಕ್ತ ಎನಿಸುವ ಮೊತ್ತವನ್ನು ಹೂಡಿಕೆ ಮಾಡಬಹುದು. ಉದಾಹರಣೆಗೆ, 12,500 ರೂಪಾಯಿಯನ್ನು ಪ್ರತಿ ತಿಂಗಳು 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಒಟ್ಟು 7,50,000 ರೂಪಾಯಿ ಹೂಡಿಕೆಯಿಂದ 1,43,074 ರೂಪಾಯಿ ಬಡ್ಡಿ ಲಭಿಸುತ್ತದೆ. ಮೆಚ್ಯೂರಿಟಿ ವೇಳೆ 8,92,074 ರೂ. ನಿಮಗೆ ಲಭಿಸುತ್ತದೆ. ಹಾಗಾಗಿ, ಪೋಸ್ಟ್ ಆಫೀಸ್ ಆರ್ ಡಿಯೇ ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ.
 
                                 
			 
			
 
                                 
                                


















