ದಾವಣಗೆರೆ: ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ನಡೆದಿತ್ತು. ಆ ಹಿನ್ನೆಲೆಯಲ್ಲಿ ಸರಣಿ ಚೈನ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ದಾವಣಗೆರೆ ಭರತ ಕಾಲೋನಿಯ ಅರುಣ ಕುಮಾರ ಡಿಪಿ(28) ಬಕ್ಕೇಶ(29) ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 14,50,000 ರೂ. ಬೆಲೆಯ ಆಭರಣಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಖದೀಮರು ವೃದ್ಧರು ಮತ್ತು ವಯಸ್ಕರನ್ನು ಟಾರ್ಗೆಟ್ ಮಾಡಿ ಜನವರಿಯಿಂದ ಮಾರ್ಚ್ ವರೆಗೆ ವಿದ್ಯಾನಗರ ಠಾಣಾ ವ್ಯಾಪ್ತಿಯ 6 ಜನರ ಚೈನನ್ನು ಕಳ್ಳತನ ಮಾಡಿದ್ದಾರೆ. ಇದೀಗ ಕಳ್ಳರನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದು, ಪೊಲೀಸ್ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಚೈನ್ ಕಳೆದುಕೊಂಡಿದ್ದ ಮಹಿಳೆಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ..