ಬೆಂಗಳೂರು: ನಗರದಲ್ಲಿ ನಕಲಿ ಬ್ರಾಂಡೆಡ್ ಶರ್ಟ್ ತಯಾರಿಸುತ್ತಿದ್ದ ನಕಲಿ ಕಂಪನಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಮೇರಿಕನ್ ಕಂಪನಿ ಬ್ರಾಂಡೆಂಡ್ ಶರ್ಟ್ಸ್ ನಕಲಿ ತಯಾರಿಸಿ ಮಾರಾಟ ಮಾರಾಟ ಮಾಡುತ್ತಿದ್ದ ಐವತ್ತು ಲಕ್ಷ ರೂ. ಮೌಲ್ಯದ ನಕಲಿ ಬ್ರಾಂಡೆಡ್ ಶರ್ಟ್ಸ್ ಗಳನ್ನು ಸೀಜ್ ಮಾಡಲಾಗಿದೆ. ಐದು ಸಾವಿರ ಬೆಲೆಯ ವಿದೇಶಿ ಬ್ರಾಂಡೆಡ್ ಶರ್ಟ್ಸ್ 500 ರೂ. ರಿಂದ 700 ರೂ.ಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಕಲಿ ಬ್ರಾಂಡೆಡ್ ಲೇಬಲ್ ಹಾಕಿ ಹೈದರಾಬಾದ್, ಚೆನ್ನೈ, ಲೂಧಿಯಾನ ಸೇರಿದಂತೆ ಹಲವು ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಈ ನಕಲಿ ಬ್ರಾಂಡೆಡ್ ಶರ್ಟ್ಸ್ ತಯಾರಿಕಾ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯು.ಎಸ್. ಪೊಲೋ, ಸ್ವೀಡೆನ್ ಬರ್ಬರಿ ಬ್ರಾಂಡೆಡ್ ನ ನಕಲಿ ಶರ್ಟ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಅನ್ವೇಷ್ ಐಪಿಆರ್ ಸರ್ವೀಸ್ ಕಂಪನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬಟ್ಟೆ ಸೀಜ್ ಮಾಡಲಾಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಫ್, ಶರೀಫುದ್ದೀನ್, ಸರವಣ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ತೋಟದಗುಟ್ಟದಹಳ್ಳಿಯಲ್ಲಿ ಈ ದಾಳಿ ನಡೆದಿದೆ. ಬಂಧಿತ ಆರೋಪಿಗಳು ಲೈಸೆನ್ಸ್ ಇಲ್ಲದೇ ಸಂಗಮ್ ಅಪೆರಲ್ಸ್ ಹೆಸರಿನಲ್ಲಿ ಬ್ರಾಂಡೆಡ್ ಬಟ್ಟೆ ನಕಲು ಮಾಡುತ್ತಿದ್ದರು ಎನ್ನಲಾಗಿದೆ.