ತುಮಕೂರು : ಕ್ಷೇತ್ರದಲ್ಲಿ ತಲೆಯೆತ್ತಿಕೊಂಡು ಓಡಾಡಲಿಕ್ಕೆ ಆಗುತ್ತಿಲ್ಲ. ಕರ್ನಾಟಕದ ಪಾಲಿಗೆ ಕಾಂಗ್ರೇಸ್ ಸರ್ಕಾರ ಸತ್ತು ಮಲಗಿದೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ತುಮುಕೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕಾಂಗ್ರೇಸ್ ಶಾಸಕರ ಜೊತೆ ಸಭೆ ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೇಸ್ ನವರೇ ಕರ್ನಾಟಕವನ್ನು ಆಳುತ್ತಿದ್ದಾರೆ. ಸಿಎಂ ಎಲ್ಲಾ ಶಾಸಕರನ್ನು ಸಭೆಗೆ ಕರೆಯಬೇಕಿತ್ತು. ಕರ್ನಾಟಕ ಸಮಗ್ರ ಅಭಿವೃದ್ಧಿ ಅಗಬೇಕು ಅಂದರೆ, ಎಲ್ಲಾ ಶಾಸಕರನ್ನು ಕರೆದು ಅನುದಾನ ಕೊಡುವುದರ ಬಗ್ಗೆ ಮಾತಾಡಬೇಕಿತ್ತು. ಈ ತಾರತಮ್ಯ ಸಿದ್ದರಾಮಯ್ಯರಿಗೆ ಯಾಕಿದೆ ಗೊತ್ತಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಹೋಗುವ ಕಾಲದಲ್ಲಿ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡ್ತು ಅಂತ ಹೇಳುತ್ತಾರಲ್ಲವೇ. ಹಾಗಾಗಿ ಸಿದ್ದರಾಮಯ್ಯ ಇಳಿಯುವ ಕಾಲದಲ್ಲಿ ಇಂತಹ ಆರೊಪ ಹೊತ್ತುಕೊಳ್ಳುತ್ತಿದ್ದಾರೆ. 50 ಕೋಟಿ ಅನುದಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲೂ ತಾರತಮ್ಯ ಮಾಡಿದರೆ, ಅಸೆಂಬ್ಲಿ ನಡೆಯುವುದಕ್ಕೆ ಬಿಡಲ್ಲವೆಂದು ಅಶೋಕ್ ಅವರಿಗೆ ಹೇಳಿದ್ದೇವೆ. 50 ಕೋಟಿ ಅನುದಾನ ಎಲ್ಲರಿಗೂ ಸಮಾನವಾಗಿ ಹಂಚಬೇಕು. ಬಜೆಟ್ ಬುಕ್ ನಲ್ಲಿಯೂ ಘೋಷಣೆಯಾಗಿದೆ. ಅನುದಾನ ಕೊಟ್ಟಿಲ್ಲ ಅಂದರೆ ಯಾವುದೇ ಕಾರಣಕ್ಕೂ ಅಸೆಂಬ್ಲಿ ನಡೆಯುವುದಕ್ಕೆ ಬಿಡಲ್ಲ. ಇಂತಹ ದರಿದ್ರ ಸರ್ಕಾರವನ್ನು ಜನರು ಎಂದೂ ನೋಡಿರಲ್ಲ ಎಂದು ಅವರು ಕಿಡಿ ಕಾರಿದ್ದಾರೆ.