ಕರ್ತವ್ಯ ಲೋಪದ ಹಿನ್ನಲೆ ದೇವರೆಡ್ಟಿಹಳ್ಳಿ ಗ್ರಾ.ಪಂ. ಪಿಡಿಒ ಅನ್ನು ಸಸ್ಪೆಂಡ್ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ದೇವರೆಡ್ಡಿ ಹಳ್ಳಿ ಗ್ರಾಪಂ PDO ವೇದವ್ಯಾಸಲು ರನ್ನ ಸಸ್ಪೆಂಡ್ ಮಾಡಿ ಜಿ.ಪಂ. CEO ಆದೇಶ ಹೊರಡಿಸಿದ್ದಾರೆ.
ಚಿತ್ರದುರ್ಗ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್ ಅಮಾನತು ಆದೇಶ ಹೊರಡಿಸಿದ್ದಾರೆ. 2023 ರಿಂದ2025 ರಲ್ಲಿ 15ನೇ ಹಣಕಾಸು,ಪ್ರವರ್ಗ1, ನರೇಗಾದಲ್ಲಿ ಬಾರಿ ಅವ್ಯವಹಾರವೆಸಗಿದ ಆರೋಪದ್ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.
2,31,54,326 ರೂ ಖರ್ಚು ಮಾಡಿದ್ದಕ್ಕೆ ದಾಖಲೆ ಸಲ್ಲಿಸದ ಹಿನ್ನೆಲೆ ಹಾಗೂ ಮಾರ್ಗಸೂಚಿ ಪಾಲಿಸದೇ ನಿಯಮ ಬಾಹಿರವಾಗಿ ಹಣ ದುರ್ಬಳಕೆ ಮಾಡಿರುವ ಆರೋಪ PDO ವೇದವ್ಯಾಸಲು ಅವರ ಮೇಲೆ ಕೇಳಿ ಬಂದಿತ್ತು. ಭ್ರಷ್ಟಾಚಾರ ಕುರಿತು ಗ್ರಾಮ ಪಂಚಾಯತ್ ಸದಸ್ಯರು ದೂರು ಕೂಡ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.