ಬಾಗಲಕೋಟೆ : ತಂದೆ-ತಾಯಿ ಸೇರಿ ಬೆಂಕಿ ಹಚ್ಚಿ ಮಗನನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನಿಲ್ ಕಾನಟ್ಟಿ(32) ತಂದೆ-ತಾಯಿಯಿಂದ ಹತ್ಯೆಯಾದ ವ್ಯಕ್ತಿ ಎನ್ನಲಾಗಿದೆ. ಮದ್ಯ ವ್ಯಸನಿಯಾಗಿದ್ದ ಮಗನ ಕಾಟ ತಾಳಲಾರದೆ ತಂದೆ- ತಾಯಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಮಾಡಿದ ತಂದೆ ಪರಪ್ಪ, ತಾಯಿ ಶಾಂತಾ ಹಾಗೂ ಸಹೋದರ ಬಸವರಾಜನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅನಿಲ್ ಮದ್ಯವ್ಯಸನಿಯಾಗಿದ್ದು, ಪ್ರತಿ ದಿನ ಕಂಠಪೂರ್ತಿ ಕುಡಿದು ಬಂದು ಕುಟುಂಬಸ್ಥರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಸೆ. 5ರಂದು ಕೂಡ ಕಂಠಪೂರ್ತಿ ಕುಡಿದು ಬಂದು ಮನೆಯವರೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. ಆತನ ವರ್ತನೆಯಿಂದ ಬೇಸತ್ತ ತಂದೆ, ತಾಯಿ ಹಾಗೂ ಸಹೋದರ ಅನಿಲ್ ಕೈ, ಕಾಲು ಕಟ್ಟಿ ಡೀಸೆಲ್ ಸುರಿದು ಸಜೀವವಾಗಿ ದಹನ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.