ಇಸ್ರೇಲ್ ಮೇಲೆ ಪಾಕಿಸ್ತಾನ ಅಣ್ವಸ್ತ್ರ ದಾಳಿ ನಡೆಸಲಿದೆ ಎಂದು ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾಪ್ಸ್ ಹಿರಿಯ ಜನರಲ್ ಮತ್ತು ಇರಾನಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಮೊಹ್ಸೆನ್ ರೆಝಾಯಿ ಇರಾನ್ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒಂದೊಮ್ಮೆ ಇರಾನ್ ಮೇಲೆ ಇಸ್ರೇಲ್ ಅಣು ಬಾಂಬ್ ದಾಳಿ ನಡೆಸಿದರೆ, ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ನಮ್ಮ ಪರ ದಾಳಿ ಮಾಡಲಿದೆ ಎಂದಿದ್ದಾರೆ. ಈ ಬಗ್ಗೆ ಖುದ್ದು ಪಾಕಿಸ್ತಾನ ಮೌಖಿಕ ಬೆಂಬಲ ನೀಡಿದೆ ಅಂತಾ ರೆಝಾಯಿ ಹೇಳಿದ್ದಾರೆ.
ಪಾಕಿಸ್ತಾನದ ಶಹೀನ್-3 ಅಣ್ವಸ್ತ್ರ ಸಿಡಿತಲೆ 2700 ಕಿಲೋಮೀಟರ್ ವರೆಗಿನ ಟಾರ್ಗೆಟ್ ನ್ನು ಧ್ವಂಸ ಮಾಡುವ ತಾಕತ್ತು ಹೊಂದಿದೆ. ಇಸ್ರೇಲ್ ನ ಯಾವ ಪ್ರದೇಶವನ್ನಾದರೂ ಟಾರ್ಗೆಟ್ ಮಾಡಿ ಅಣ್ವಸ್ತ್ರದ ಮೂಲಕ ಸಂಹರಿಸುವ ತಾಕತ್ತು ಪಾಕಿಸ್ತಾನದ ಅಣ್ವಸ್ತ್ರಕ್ಕಿದೆ. ಅಷ್ಟೇ ಅಲ್ಲಾ, ಇಂಥಾ ಹಲವು ತಾಕತ್ತುಗಳು, ಇರಾನ್ ನ ಬತ್ತಳಿಕೆಯಲ್ಲಿವೆ. ಎಲ್ಲವನ್ನೂ ಈಗಲೇ ಬಹಿರಂಗ ಪಡಿಸೋದಕ್ಕೆ ಆಗೋದಿಲ್ಲ. ಆದರೆ, ಸಮಯ ಮತ್ತು ಅನಿವಾರ್ಯತೆ ಎರಡೂ ಒಟ್ಟಾಗಿ ಬಂದರೆ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳೆಲ್ಲಾ ಇರಾನ್ ಪರ ಬೆಂಬಲಕ್ಕೆ ನಿಲ್ಲಲಿವೆ ಅಂತಲೂ ರೆಝಾಯಿ ಹೇಳಿದ್ದಾರೆ.