ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಈಗ ಯುದ್ಧ ಭೀತಿ ಆವರಿಸಿದೆ. ಭಾರತ ಯಾವ ಸಂದರ್ಭದಲ್ಲಾದರೂ ದಾಳಿ ಮಾಡಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ ಭಯದಲ್ಲಿ ಕಾಲ ಕಳೆಯುವಂತಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಎಲ್ಒಸಿ ಗಡಿಗೆ ಭೇಟಿ ನೀಡಿ ತಮ್ಮ ಸೈನಿಕರೊಂದಿಗೆ ಮಾತುಕತೆ ಹಾಗೂ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರು ಗಡಿಯಲ್ಲಿ ವೀಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೇಳೆ ತನ್ನ ಕುತಂತ್ರಿ ಬುದ್ಧಿಯನ್ನು ಕೂಡ ಪಾಕಿಸ್ತಾನ ತೋರಿಸಿದೆ. ಭಾರತಕ್ಕೆ ಬುದ್ಧಿ ಕಲಿಸಲು 240 ಮಿಲಿಯನ್ ಪಾಕಿಸ್ತಾನಿಗಳು ಕಾಯುತ್ತಿದ್ದಾರೆ. ಬುದ್ಧಿವಂತಿಕೆಯಿಂದ ವರ್ತಿಸುವ ಮೊದಲು ಸಾವಿರ ಬಾರಿ ಯೋಚಿಸುವಂತೆ ಭಾರತಕ್ಕೆ ಎಚ್ಚರಿಕೆ ನೀಡಿ, ಈ ವಿಡಿಯೋ ಹರಿಬಿಡಲಾಗಿದೆ. ಆದರೆ, ಈ ವಿಡಿಯೋ ಮಾತ್ರ ಈಗಿಂದ? ಅಥವಾ ಹೊಸದಾ? ಎಂಬುವುದು ಗೊತ್ತಾಗಿಲ್ಲ.