ಏಪ್ರಿಲ್ 22ರ ಪಹಲ್ಗಾಮ್ ದಾಳಿ ಬಳಿಕ ಇದೇ ಮೊದಲ ಬಾರಿ ಪಾಕ್ ಮತ್ತೊಂದು ಕೆಟ್ಟ ಹೆಜ್ಜೆ ಇಟ್ಟಿದೆ.
ಏಪ್ರಿಲ್ 22ರ ನಂತ್ರ ಕದನ ವಿರಾಮ ಉಲಂಘಿಸುತ್ತಲೇ ಬರುತ್ತಿರುವ ಪಾಕ್ ಇದೀಗ ದೊಡ್ಡ ದುಸ್ಸಾಹಸಕ್ಕೆ ಕೈಹಾಕಿದೆ. ಈವರೆಗೂ ರಾತ್ರಿ ವೇಳೆ ಅಪ್ರಚೋದಿತ ದಾಳಿ ನಡೆಸುತ್ತಿದ್ದ ಪಾಕ್ ಇಂದು ಹಗಲು ಹೊತ್ತಿನಲ್ಲೇ ಗುಂಡಿನ ಸುರಿಮಳೆ ಸುರಿಸಲು ಆರಂಭಿಸಿದೆ.
ಜಮ್ಮು, ರಾಜಸ್ಥಾನ್, ಪಂಜಾಬ್ ಭಾಗಗಳಲ್ಲಿ ಪಾಕ್ ನಿರಂತರ ಗುಂಡಿನ ದಾಳಿ ಆರಂಭಿಸಿದೆ. ಜಮ್ಮುವಿನ ಪೂಂಚ್, ರಜೌರಿ ಸೆಕ್ಟರ್ ಗಳಲ್ಲಿ ಭಾರಿ ಪ್ರಮಾಣದ ದಾಳಿ ಆರಂಭಿಸಲಾಗಿದೆ. ಜನವಸತಿ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಈ ಅಟ್ಯಾಕ್ ನಡೆಸಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆಯೂ ತಿರುಗೇಟು ನೀಡುತ್ತಿದೆ.