ಭಾರತದ ವಿರುದ್ಧ ಡ್ರೋನ್ ಸಮರ ಸಾರಿದ್ದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದೆ ಭಾರತ. ಹೌದು, ಕಳೆದೆರಡು ದಿನಗಳಿಂದ ನಿರಂತರವಾಗಿ ಭಾರತದ ವಿರುದ್ಧ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಪಾಕ್ ಮೇಲೀಗ ಭಾರತೀಯ ಸೇನೆ ಸಮರ ಸಾರಿದೆ. ಅದ್ರಲ್ಲೂ ಈ ಬಾರಿ ಪಾಕ್ ನ ಸಿಯಾಲ್ ಕೋಟೆ ಗೆ ನೇರ ನುಗ್ಗಿ ಅಬ್ಬರಿಸಿದೆ. ಸಿಯಾಲ್ ಕೋಟ್ ನ ಡ್ರೋನ್ ಲಾಂಚ್ ಪ್ಯಾಡ್ ಗಳನ್ನು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿರುವ ಭಾರತ, ಎಲ್ಲವನ್ನೂ ಧ್ವಂಸಗೊಳಿಸಿದೆ. ಅಷ್ಟೇ ಅಲ್ಲಾ ಶ್ರೀನಗರ ಮತ್ತು ದೆಹಲಿಯತ್ತ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನದ 3 ಫೈಟರ್ ಜೆಟ್ ಗಳನ್ನು ಆಗಸದಲ್ಲೇ ಸುಟ್ಟು ಬೂದಿ ಮಾಡಲಾಗಿದೆ. ಇದರೊಟ್ಟಿಗೆ ಇಸ್ಲಾಮಾಬಾದ್ ನ ನೂರ್ ಖಾನ್ ಏರ್ ಬೇಸ್ ಸೇರಿ 3 ಪ್ರಮುಖ ವಾಯುನೆಲೆಗಳನ್ನು ಭಾರತ ಚಿಂದಿ ಉಡಾಯಿಸಿದೆ.