ಮಂಡ್ಯ : ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹಿನ್ನೆಲೆ ಬಿಚ್ಚಿ ನೋಡಿದಾಗ ಅವರ ಸಂಸ್ಕೃತಿ ಎಂಥದ್ದು ಎಂಬುವುದು ಗೊತ್ತಾಗುತ್ತದೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಅವರು, ಡಿಸಿಎಂ ರಾಜ್ಯದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಂಸ್ಕೃತಿಯೇ ಅಂಥದ್ದು, ಹೀಗಾಗಿ ಅವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕುಮಾರಣ್ಣ ಎಂದು ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ. ನಿಮ್ಮದೆ ಪಕ್ಷದ ಮಂತ್ರಿಗಳು ಸದನದಲ್ಲಿ ನಿಂತು ಹನಿಟ್ರ್ಯಾಪ್ ಬಗ್ಗೆ ಆತಂಕ ತೋಡಿಕೊಂಡಿದ್ದರು. ನಿಮ್ಮದು ಹನಿಟ್ರ್ಯಾಪ್, ಮನಿ ಟ್ರ್ಯಾಪ್, ತೆರಿಗೆ ಟ್ರ್ಯಾಪ್. ಎಂದು ಉಸಿರಾಡಲೂ ಆಗದಂತಹ ಸ್ಥಿತಿಯನ್ನು ಡಿಸಿಎಂ ತಂದು ಇಟ್ಟಿದ್ದಾರೆ. ರಾಜ್ಯಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡ್ತಿದ್ದಿರುವ ಡಿಸಿಎಂ ನಿಮಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ.