ಬೆಂಗಳೂರು: ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಹಲವು ಹಣಕಾಸು ನಿಯಮಗಳು ಬದಲಾಗುತ್ತವೆ. ಅದರಂತೆ, ಅಕ್ಟೋಬರ್ 1ರಿಂದಲೂ ವಿವಿಧ ನಿಯಮಗಳು ಬದಲಾಗುತ್ತಿವೆ. ಹಣಕಾಸು ವಹಿವಾಟು (New Financial Rules From October 1) ಮಾಡುವವರು ನಿಯಮಗಳನ್ನು ತಿಳಿದುಕೊಂಡರೆ ಉತ್ತಮವಾಗಿದೆ. ಹಾಗಾದರೆ, ಅಕ್ಟೋಬರ್ 1ರಿಂದ ಯಾವೆಲ್ಲ ನಿಯಮಗಳು ಬದಲಾಗುತ್ತವೆ? ಇಲ್ಲಿದೆ ಮಾಹಿತಿ.
1. ಆನ್ ಲೈನ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ಅಕ್ಟೋಬರ್ 1ರಿಂದ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ. ಐಆರ್ ಸಿಟಿಸಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾದ ಮೊದಲ 15 ನಿಮಿಷಗಳವರೆಗೆ ಆಧಾರ್ ನಮೂದಿಸುವುದು ಕಡ್ಡಾಯವಾಗಿದೆ.
2. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಅಕ್ಟೋಬರ್ 1ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (ಎನ್ ಪಿಎಸ್) ದೊಡ್ಡ ಬದಲಾವಣೆ ತರುತ್ತಿದೆ. ಖಾಸಗಿ ವಲಯದ ಎನ್ ಪಿ ಎಸ್ ಸದಸ್ಯರು ಈಗ ಒಂದೇ PAN ಅಥವಾ PRAN ಅಡಿಯಲ್ಲಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇದರಿಂಧ ಹೂಡಿಕೆದಾರರಿಗೆ ಹೆಚ್ಚು ಆಯ್ಕೆಗಳು ದೊರೆಯಲಿದ್ದು, ನಿವೃತ್ತಿ ನಿಧಿ ರೂಪಿಸುವಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ.
3. ಅಕ್ಟೋಬರ್ 1ರಿಂದ ಆನ್ ಲೈನ್ ಗೇಮಿಂಗ್ ವಲಯದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ. ಇದರ ಪ್ರಕಾರ, ದೇಶದಲ್ಲಿ ಯಾವುದೇ ರೀತಿಯ ಆನ್ ಲೈನ್ ಜೂಜಾಟ, ಬೆಟ್ಟಿಂಗ್ ಅಥವಾ ಹಣಕಾಸು ವಹಿವಾಟು ಇರುವ ಗೇಮ್ ಗಳಿಗೆ ಅವಕಾಶವಿರುವುದಿಲ್ಲ.
4. ಮನೆಬಳಕೆ ಅಡುಗೆ ಅನಿಲ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಬೆಲೆ ಏರಿಕೆ ಅಥವಾ ಇಳಿಕೆ ಕುರಿತು ಕಂಪನಿಗಳು ಅಕ್ಟೋಬರ್ 1ರಂದು ಘೋಷಣೆ ಮಾಡಲಿವೆ.