ಸಿಲಿಕಾನ್ ಸಿಟಿ ಟ್ರಾಫಿಕ್ ಕಂಟ್ರೋಲ್ ಗೆ ಹೊಸ ಡಿಪಿಅರ್ ಸಿದ್ದತೆ ಮಾಡಲಾಗಿದೆ.
ದೆಹಲಿಯ ಖಾಸಗಿ ಸಂಸ್ಥೆಯಿಂದ ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಬಿಬಿಎಂಪಿಗೆ ಕಾರ್ಯ ಸಾಧ್ಯತೆ ವರದಿ ಸಲ್ಲಿಸಲಾಗಿದೆ. ಸುಮಾರು 45 ಸಾವಿರ ಕೋಟಿ ರೂ. ವೆಚ್ಚದ ಡಿಪಿಆರ್ ಇದಾಗಿದೆ.
ಈ ಡಿಪಿಆರ್ 2024-25ರ ಬಜೆಟ್ ನಲ್ಲಿ ಸಿಎಂ ಘೋಷಿಸಿರುವ ಯೋಜನೆಗಳನ್ನು ಕೂಡ ಒಳಗೊಂಡಿದೆ. ಈ ಯೋಜನೆಗಳನ್ನು ಪಾಲಿಕೆ ಹಲವಾರು ವರ್ಷಗಳಿಂದ ನೆನೆಗುದಿಗೆ ಕೆಡವಿತ್ತು. ಹೀಗಾಗಿ ಈಗ ಇವುಗಳನ್ನೆಲ್ಲ ಕ್ರೂಢೀಕರಿಸಿ ಯೋಜನೆಗಳ ವೆಚ್ಚ, ಅನುಷ್ಠಾನದ ಮಾರ್ಗ, ಪರಿಸರದ ಮೇಲಿನ ಪರಿಣಾಮ ಸೇರಿದಂತೆ ಹಲವು ಯೋಜನೆಗಳನ್ನು ಸೇರಿಸಿ ವರದಿ ಸಿದ್ಧಪಡಿಸಲಾಗಿದೆ.
ಬೆಂಗಳೂರಿನ ಸಮಗ್ರ ಸಂಚಾರ ನಿರ್ವಹಣೆ ಯೋಜನೆಯ ಡಿಪಿಅರ್ ಇದಾಗಿದೆ. ಇದರಲ್ಲಿ ಸದ್ಯ ಇರುವ ರಸ್ತೆ, ಜಂಕ್ಷನ್ ಇಂಟರ್ ಸೆಕ್ಷನ್ ಸಂಚಾರಕ್ಕೆ ಹಲವು ಸಲಹೆಗಳನ್ನು ನೀಡಲಾಗಿದೆ. ಮೈಸೂರು ರಸ್ತೆ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆ ಸೇರಿದಂತೆ 5 ರಸ್ತೆಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.
ಅಂಡರ್ ಪಾಸ್, ಮೇಲ್ಸೇತುವೆ, ಸಂಪರ್ಕ ರಸ್ತೆಗಳನ್ನು ನಿರ್ಮಿಸುವುದು. 12 ಎಲಿವೇಟೆಡ್ ಕಾರಿಡಾರ್, 2 ಕಿರು ಪ್ಲೈ ಓವರ್, ಎರಡು ಡಬಲ್ ಡೆಕ್ಕರ್ ಕಾರಿಡಾರ್ ಹಾಗೂ ಎರಡು ಹೊಸ ಸುರಂಗ ರಸ್ತೆ ನಿರ್ಮಾಣ. ಸಾರ್ವಜನಿಕರಿಗೆ ಅನುಕೂಲವಾಗ ಮೆಟ್ರೋ ಯೋಜನೆ ಸೇರಿ ಹಲವು ಯೋಜನೆಗಳನ್ನು ಡಿಪಿಆರ್ ನಲ್ಲಿ ಸೇರಿಸಲಾಗಿದೆ.