ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್.ವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮುಲ್ಲೈ ಮುಹಿಲಾನ್ ಬೆಂಗಳೂರು ನೋಂದಣಿ ಮಹಾನಿರೀಕ್ಷಕ ಮತ್ತು ಸ್ಟಾಂಪ್ಸ್ ಆಯುಕ್ತರಾಗಿ ಕಾರ್ಯಭಾರ ಆರಂಭಿಸಲಿದ್ದಾರೆ.